ADVERTISEMENT

ಕುಶಾಲನಗರ: ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:07 IST
Last Updated 6 ಜನವರಿ 2024, 6:07 IST
ಕುಶಾಲನಗರ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಕುಶಾಲನಗರ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.   

ಕುಶಾಲನಗರ: ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ನಡೆಯಿತು.

 ಜಕಣಾಚಾರಿ ಅವರ ಭಾವಚಿತ್ರಕ್ಕೆ ಸಮಾಜ ಅಧ್ಯಕ್ಷ ಎಚ್.ಬಿ.ಲಿಂಗಮೂರ್ತಿ  ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ‘ಅಮರಶಿಲ್ಪಿ ಜಕಣಾಚಾರ್ಯ ಅವರು ಬೇಲೂರು ಹಳೇಬೀಡು ಮುಂತಾದ ದೇವಾಲಯಗಳ ನಿರ್ಮಾಣ ಹಾಗೂ ಅನೇಕ ಸುಂದರ ಶಿಲ್ಪಗಳನ್ನು ನಿರ್ಮಾಣ ಮಾಡಿ ಕರ್ನಾಟಕದ ವಾಸ್ತುಶಿಲ್ಪಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ.  ಅವರು ಕರ್ನಾಟಕ ವಾಸ್ತುಶಿಲ್ಪಕಲಾ ಸಾಂಸ್ಕೃತಿಕ ರಾಯಭಾರಿ’ ಎಂದು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷ ದುರ್ಗೇಶ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಜಕಣಾಚಾರಿ ನಾಡಿನ ಶಿಲ್ಪಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ವಿ. ಕುಮಾರ್ ರಾಜಮೂರ್ತಿ, ನಾಗಣ್ಣಾಚಾರ್, ಕೆ.ಬಿ.ಮೋಹನ್, ಸೋಮಶೇಖರ್, ನಿಂಗಾಚಾರ್, ದಕ್ಷಿಣ ಮೂರ್ತಿ, ಸುಬ್ಬಾಚಾರ್, ರಾಮಕೃಷ್ಣ ಆಚಾರ್ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾವರದ ರಾಜ್, ಭಾರತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.