ADVERTISEMENT

ಸಿದ್ದಾಪುರ: ಭೂಪರಿವರ್ತನೆ ವಿರುದ್ಧ ಮುಂದುವರಿದ ಆಕ್ರೋಶ

ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಸಿದ್ದಾಪುರದಲ್ಲಿ ಮಾನವ ಸರಪಳಿ ರಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:26 IST
Last Updated 17 ಜೂನ್ 2024, 16:26 IST
ಕೊಡಗಿನಲ್ಲಿ ಬೃಹತ್ ಪ್ರಮಾಣದ ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಮತ್ತು ಸದಸ್ಯರು ಸೋಮವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು
ಕೊಡಗಿನಲ್ಲಿ ಬೃಹತ್ ಪ್ರಮಾಣದ ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಮತ್ತು ಸದಸ್ಯರು ಸೋಮವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು   

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾಫಿ ತೋಟಗಳನ್ನು ನಿವೇಶನಗಳನ್ನಾಗಿ ಭೂಪರಿವರ್ತನೆ ಮಾಡುವುದರ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಸಿದ್ದಾಪುರ ಪಟ್ಟಣದಲ್ಲಿ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಬೃಹತ್ ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಕೊಡಗಿನಲ್ಲಿ ಬೃಹತ್ ಭೂಪರಿವರ್ತನೆ ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಕುರಿತು ಸಂಶಯ ಇದೆ’ ಎಂದು ಹೇಳಿದರು.

ಒಂದೇ ಬಾರಿಗೆ ಸಾವಿರಾರು ಎಕರೆ ಪ್ರದೇಶಗಳನ್ನು ಭೂಪರಿವರ್ತನೆ ಮಾಡಿದರೆ ಕಾನೂನಿನ ಕುಣಿಕೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಹಾಗೂ ಹೋರಾಟಗಳು ನಡೆಯುತ್ತವೆ ಎಂಬ ಕಾರಣಕ್ಕೆ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ADVERTISEMENT

ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭೂಮಾಫಿಯ ಹಾಗೂ ರಾಜಕೀಯ ಬೆಂಬಲಿಗರು ಕೊಡವ ಭೂಮಿಯನ್ನು ವ್ಯಾಪರೀಕರಣಗೊಳಿಸಲು ಮುಂದಾಗಿದ್ದಾರೆ. ಹಸಿರ ಸುಂದರ ಪ್ರಕೃತಿಯ ಸೊಬಗನ್ನು, ಜಲಮೂಲಗಳನ್ನು ನಾಶಗೊಳಿಸಿ ಬೃಹತ್ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಭೂಮಿ ಖರೀದಿ ವ್ಯವಹಾರ ಒಂದು ಜೂಜಾಟದಂತೆ ನಡೆಯುತ್ತಿದ್ದು, ಈ ಬೆಳವಣಿಗೆ ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರ ನಾಶಕ್ಕೂ ಕಾರಣವಾಗಬಹುದು. ಜೊತೆಗೆ, ಈ ಕೊಡವ ನೆಲದಲ್ಲಿ ಬದುಕು ಕಂಡುಕೊಂಡಿರುವ ಇತರ ಜನಾಂಗದ ಅಸ್ತಿತ್ವಕ್ಕೂ ಧಕ್ಕೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಡವರಿಗೆ ಹಣದ ಆಮಿಷವೊಡ್ಡಿ ಇಡೀ ಭೂಪ್ರದೇಶವನ್ನು ಆವರಿಸಿಕೊಳ್ಳುತ್ತಿರುವ ಭೂಮಾಫಿಯಾದ ಬಗ್ಗೆ ಕೊಡವರು ಮಾತ್ರವಲ್ಲದೆ ಇತರರು ಕೂಡ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವೆಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ಪಟ್ಟಮಾಡ ಲಲಿತಾ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಇಟ್ಟೀರ ಸಬಿತಾ, ಮುಂಡಚಾಡಿರ ಫ್ಯಾನ್ಸಿ ಕಿರಣ್, ಬುಟ್ಟಿಯಂಡ ಐಹಿಂದ್ಯಾ ಹರೀಶ್, ಬುಟ್ಟಿಯಂಡ ಪ್ರಿಯಾ, ಬುಟ್ಟಿಯಂಡ ಅನನ್ಯ, ಬುಟ್ಟಿಯಂಡ ಕೃಪಾ ಹರೀಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕಮೋಡೋರ್ ಕುಕ್ಕೇರ ಉತ್ತಪ್ಪ, ಮಂಡೇಪಂಡ ಕುಟ್ಟಣ, ದೇವಣಿರ ಸುಜಯ್, ಚೆಂದಂಡ ಚುಮ್ಮಿ ದೇವಯ್ಯ, ಬುಟ್ಟಿಯಂಡ ಹರೀಶ್ ಭಾಗವಹಿಸಿದ್ದರು.

ಕೊಡಗಿನಲ್ಲಿ ಬೃಹತ್ ಪ್ರಮಾಣದ ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಮತ್ತು ಸದಸ್ಯರು ಸೋಮವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು
ಕೊಡಗಿನಲ್ಲಿ ಬೃಹತ್ ಪ್ರಮಾಣದ ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಮತ್ತು ಸದಸ್ಯರು ಸೋಮವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು
ಕೊಡಗಿನಲ್ಲಿ ಬೃಹತ್ ಪ್ರಮಾಣದ ಕಾಫಿ ತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಮತ್ತು ಸದಸ್ಯರು ಸೋಮವಾರ ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿದರು
ಭೂಪರಿವರ್ತನೆಯ ಮಾಡಿಲ್ಲ; ತಹಶೀಲ್ದಾರ್ ಸ್ಪಷ್ಟನೆ
ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ವ್ಯಾಪ್ತಿಯಲ್ಲಿ 2400 ಎಕರೆ ಜಮೀನಿನ ಸಂಬಂಧ ಭೂ ಪರಿವರ್ತನೆಯನ್ನು ಕೋರಿ ಇದುವರೆವಿಗೂ ಯಾವುದೇ ಮನವಿಗಳು ಸ್ವೀಕೃತವಾಗಿಲ್ಲ ಹಾಗೂ ಈ ಜಮೀನುಗಳ ಭೂ ಪರಿವರ್ತನೆ ಮಾಡಿಲ್ಲ ಎಂದು ವಿರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.