ಸೋಮವಾರಪೇಟೆ: ಸಮೀಪದ ಬಜೆಗುಂಡಿ ಗ್ರಾಮದಲ್ಲಿ ಬುಧವಾರ ಆಂಬುಲೆನ್ಸ್‌ಗಾಗಿ ಕಾದ ಯುವಕನೊಬ್ಬ ರಸ್ತೆಮಧ್ಯೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬಜೆಗುಂಡಿ ಗ್ರಾಮದ ಕಾರ್ಮಿಕರಾದ ಗೌರಿ ಅವರ ಪುತ್ರ ಮನು (23) ಮೃತಪಟ್ಟ ಯುವಕ.
ಕೆಲವು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು, ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ಕೊಟ್ಟು ಬಂದಿದ್ದ. ಬುಧವಾರ ಜ್ವರದಿಂದ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಆಂಬುಲೆನ್ಸ್ ಬರುವ ಮುನ್ನವೇ ರಸ್ತೆ ಮೇಲೆ ಬಿದ್ದು ನರಳಿದ್ದಾನೆ, ಅಷ್ಟೊತ್ತಿಗೆ ಆಂಬುಲೆನ್ಸ್ ಬಂದಿದೆ, ಆರೋಗ್ಯ ಸಿಬ್ಬಂದಿ ಕರೆದೊಯ್ಯುವ ದಾರಿ ಮಧ್ಯೆ ಯುವಕ ಮೃತಪಟ್ಟಿದ್ದಾನೆ.
‘ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವಿದ್ದು, ಶವಪರೀಕ್ಷೆಯ ನಂತರ ಸಾವಿಗೆ ನಿಖರ ಮಾಹಿತಿ ತಿಳಿಯುವುದು. ಕೋವಿಡ್ ಪರೀಕ್ಷೆ ವರದಿ ಬರುವವರೆಗೆ ಸೋಂಕು ತಗುಲಿತ್ತೇ ಇಲ್ಲವೇ ಎಂದು ಹೇಳಲಾಗುವುದಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.