ನಾಪೋಕ್ಲು: ಸಮೀಪದ ಕೊಳಕೇರಿ- ಕೋಕೇರಿ ಸಂಪರ್ಕ ರಸ್ತೆ ಡಾಂಬರು ಕಾಣದೇ ವರ್ಷಗಳು ಉರುಳಿವೆ. ಕೆಲವೆಡೆ ಜಲ್ಲಿಕಲ್ಲುಗಳ ರಾಶಿ ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಸಂಚಾರಕ್ಕೆ ತೊಡಕಾದ ರಸ್ತೆಯ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದನೆ ಎಂಬಂತೆ ಜಿಲ್ಲಾ ಪಂಚಾಯಿತಿಗೆ ಒಳಪಟ್ಟ ಈ ರಸ್ತೆಯ ಕಾಮಗಾರಿಗೆ ಈಚೆಗೆ ಸಕ ಎ.ಎಸ್.ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದ್ದರು. ಭೂಮಿ ಪೂಜೆ ಮಾಡಿ ಆದಷ್ಟು ಬೇಗ ಕಾಮಗಾರಿ ಶುರು ಮಾಡುತ್ತಾರೆ ಎಂದು ನಂಬಿದ್ದ ಗ್ರಾಮಸ್ಥರಿಗೆ ನಿರಾಸೆಯಾಗಿದೆ.
ಒಂದೂವರೆ ತಿಂಗಳು ಕಳೆದರೂ ಕಾಮಗಾರಿ ಇನ್ನೂ ಶುರು ಮಾಡಿಲ್ಲ. ಕಾಫಿ ಕುಯ್ಲು ಮತ್ತು ಮೆಣಸು ಕೆಲಸ ಆರಂಭವಾದರೆ ಬೆಳೆಗಾರರಿಗೂ, ಕೆಲಸದವರಿಗೂ ಎಲ್ಲರಿಗೂ ಸಮಸ್ಯೆ ಆಗಲಿದೆ. ಶೀಘ್ರ ದುರಸ್ತಿಗೆ ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.