ADVERTISEMENT

ದಂತ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ: ಪ್ರೊ.ಯೋಂಗ್-ಡೇ ಕ್ವಾನ್

ಸಿಯೋಲ್‌‌‌ನ ದಂತ ಚಿಕಿತ್ಸಾ ತಜ್ಞ ಪ್ರೊ.ಯೋಂಗ್-ಡೇ ಕ್ವಾನ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:37 IST
Last Updated 4 ಜುಲೈ 2024, 14:37 IST
ಕಾರ್ಯಕ್ರಮದಲ್ಲಿ ಪ್ರೊ. ಯೋಂಗ್-ಡೇ ಕ್ವಾನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಯೋಂಗ್-ಡೇ ಕ್ವಾನ್ ಮಾತನಾಡಿದರು.   

ವಿರಾಜಪೇಟೆ: ‘ಇಂಪ್ಲಾಂಟ್ ಕೃತಕ ದಂತ ಚಿಕಿತ್ಸೆ ದೀರ್ಘಕಾಲ ಉತ್ತಮ ಫಲಿತಾಂಶ ನೀಡುತ್ತದೆ’ ಎಂದು ದಕ್ಷಿಣ ಕೊರಿಯಾದ ಸಿಯೋಲ್ ಪ್ರತಿಷ್ಠಿತ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಸಂಶೋಧನಾ ಘಟಕ ಹಾಗೂ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ.ಯೋಂಗ್-ಡೇ ಕ್ವಾನ್ ಅಭಿಪ್ರಾಯಪಟ್ಟರು.

ಮಗ್ಗುಲದ ಕೊಡಗು ದಂತ ವೈದ್ಯ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ವಿದ್ಯಾಸಂಸ್ಥೆಗೆ ಈಚೆಗೆ ಭೇಟಿ ನೀಡಿದ ಸಂದರ್ಭ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಿಲ್ಲೆಯ ಸಾಮಾನ್ಯ ಜನ ಕೂಡ ಮಹಾವಿದ್ಯಾಲಯದಲ್ಲಿ ವಿಶ್ವದರ್ಜೆಯ ಇಂಪ್ಲಾಂಟ್ ಕೃತಕ ದಂತ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದರು.

ADVERTISEMENT

 ಮಹಾವಿದ್ಯಾಲಯದ ಡೀನ್ ಡಾ. ಸುನಿಲ್ ಮುದ್ದಯ್ಯ ಮಾತನಾಡಿ,‘ವಿದ್ಯಾಲಯ ರೋಗಿಗಳ ಆರೈಕೆ ಮತ್ತು ದಂತ ಶಿಕ್ಷಣದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ದಂತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಚಿಕಿತ್ಸೆ ಒದಗಿಸುವ ಅತ್ಯಾಧುನಿಕ ಕೇಂದ್ರವಾಗಿ ಅಭಿವೃದ್ಧಿಗೊಂಡಿದೆ. ಸಂಸ್ಥೆ ನಿರಂತರವಾಗಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದೆ. ದಂತ ಮತ್ತು ಮುಖದ ರಚನೆಗಳ ನಷ್ಟವನ್ನು ಸರಿಪಡಿಸಿಕೊಳ್ಳಬಹುದು’ ಎಂದರು.

ಈ ಸಂದರ್ಭ ಮಹಾವಿದ್ಯಾಲಯ ಹಾಗೂ ಕ್ಯುಂಗ್ ಹಿ ವಿಶ್ವವಿದ್ಯಾನಿಲಯ ಪರಸ್ಪರ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಪೊನ್ನಪ್ಪ, ಉಪ ಪ್ರಾಂಶುಪಾಲ ಡಾ.ಜಿತೇಶ್, ಕಾಲೇಜಿನ ಇಂಪ್ಲಾಂಟ್ ಘಟಕದ ಮುಖ್ಯಸ್ಥ ಡಾ.ವಿನಯ್, ಡಾ.ಬಸವರಾಜ್ ಮತ್ತು ಡಾ. ಅಮಿತ್ ಸೇರಿ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿರಾಜಪೇಟೆ ಸಮೀಪದ ಮಗ್ಗುಲದಲ್ಲಿನ ಕೊಡಗು ದಂತ ವೈದ್ಯ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ವಿದ್ಯಾಸಂಸ್ಥೆಗೆ ಈಚೆಗೆ ದಕ್ಷಿಣ ಕೊರಿಯಾದ ಸಿಯೋಲ್ನ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಸಂಶೋಧನಾ ಘಟಕ ಹಾಗೂ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ. ಯೋಂಗ್-ಡೇ ಕ್ವಾನ್ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.