ADVERTISEMENT

ಮಡಿಕೇರಿ: 22 ಚೀಲ ಕಸ ಸಂಗ್ರಹಿಸಿದ ಡಿಎಸ್‌ಎಸ್

ಮಡಿಕೇರಿಯಲ್ಲಿ ದಲಿತ ಸಂಘರ್ಷ ಸಮಿತಿ, ಅಶೋಕ್‍ಪುರ ಟೀಂ14 ಸಂಘದವರಿಂದ ಸೇವಾಕಾರ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:55 IST
Last Updated 24 ಜೂನ್ 2024, 4:55 IST
ಮಡಿಕೇರಿಯ ಸ್ವಾಗತ ಕಮಾನು ದ್ವಾರದಿಂದ ಸುದರ್ಶನ ವೃತ್ತದವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಶೋಕ್‍ಪುರ ಟೀಂ14 ಸಂಘದ ಸದಸ್ಯರು ಭಾನುವಾರ ರಸ್ತೆಬದಿಗಳಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಿದರು.
ಮಡಿಕೇರಿಯ ಸ್ವಾಗತ ಕಮಾನು ದ್ವಾರದಿಂದ ಸುದರ್ಶನ ವೃತ್ತದವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಶೋಕ್‍ಪುರ ಟೀಂ14 ಸಂಘದ ಸದಸ್ಯರು ಭಾನುವಾರ ರಸ್ತೆಬದಿಗಳಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಿದರು.   

ಮಡಿಕೇರಿ: ನಗರದ ಸ್ವಾಗತ ಕಮಾನು ದ್ವಾರದಿಂದ ಸುದರ್ಶನ ವೃತ್ತದವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಶೋಕ್‍ಪುರ ಟೀಂ14 ಸಂಘದ ಸದಸ್ಯರು ಭಾನುವಾರ ರಸ್ತೆ ಬದಿಗಳಲ್ಲಿ ಬಿದ್ದಿದ್ದ ಸುಮಾರು 22 ಚೀಲದಷ್ಟು ಕಸವನ್ನು ಸಂಗ್ರಹಿಸಿದರು.

ಈ ಎರಡೂ ಸಂಘಟನೆಗಳ 20ಕ್ಕೂ ಅಧಿಕ ಮಂದಿ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆಯವರೆಗೂ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೂ ಕಸ ಸಂಗ್ರಹಿಸುವ ಮೂಲಕ ಗಮನ ಸೆಳೆದರು.

ಈ ಬಗೆಯ ಸೇವಾಕಾರ್ಯವನ್ನು ಕನಿಷ್ಠ ಎಂದರೂ 15 ದಿನಗಳು ಅಥವಾ ತಿಂಗಳಿಗೊಮ್ಮೆ ನಗರದ ವಿವಿಧ ಭಾಗಗಳಲ್ಲಿ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ್ ತಿಳಿಸಿದರು.

ADVERTISEMENT

ಮುಖಂಡರಾದ ಎಸ್.ಕೆ. ಅಮಿತ್, ವೇಣು ಕಿಶೋರ್, ಡಾ.ಸೌಮ್ಯಾ ಪ್ರಕಾಶ್, ಎಚ್.ಆರ್. ರಮೇಶ್, ಸುನಿಲ್ ಭರತ್ ಪ್ರಜ್ವಲ್ ಸೂರ್ಯ, ಕೌಶಿಕ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.