ADVERTISEMENT

ಶನಿವಾರಸಂತೆ: ಕಷ್ಟವಾಗುತ್ತಿದೆ ಮುಂಜಾನೆಯ ಪ್ರಯಾಣ

ಸಮಯಕ್ಕೆ ಸರಿಯಾಗಿ ಬಾರದ ಬಸ್‌ಗಳು; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 4:59 IST
Last Updated 21 ಜೂನ್ 2024, 4:59 IST
ಅರಕಲಗೂಡು ಮತ್ತು ಹಾಸನ ಭಾಗಕ್ಕೆ ಮುಂಜಾನೆ ಪ್ರಯಾಣಿಸಲು ಬಸ್‌ಗಾಗಿ ಪ್ರಯಾಣಿಕರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಯುತ್ತಿರುವುದು.
ಅರಕಲಗೂಡು ಮತ್ತು ಹಾಸನ ಭಾಗಕ್ಕೆ ಮುಂಜಾನೆ ಪ್ರಯಾಣಿಸಲು ಬಸ್‌ಗಾಗಿ ಪ್ರಯಾಣಿಕರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಯುತ್ತಿರುವುದು.   

ಶನಿವಾರಸಂತೆ: ಮುಂಜಾನೆ ಹೊತ್ತಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳು ಅರಕಲಗೂಡು ಮತ್ತು ಹಾಸನ ಭಾಗಕ್ಕೆ ಪ್ರಯಾಣಿಸಲು ಬಸ್‌ಗಳು ಸೂಕ್ತ ಸಮಯಕ್ಕೆ ಬಾರದೇ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.

ಮುಂಜಾನೆ ಅರಕಲಗೂಡು ವಿಭಾಗದ ಕೆಎಸ್ಆರ್‌ಟಿಸಿ ಬಸ್ ಸಮಯಕ್ಕೆ ಸಮರ್ಪಕವಾಗಿ ಶನಿವಾರಸಂತೆಗೆ ಬಾರದೇ  ಇಲ್ಲಿಂದ ಅರಕಲಗೋಡು ಮತ್ತು ಹಾಸನ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಹಾಸನದ ಹಲವು ಕಚೇರಿಗಳಿಗೆ ಇಲ್ಲಿನ ಜನರು ಕೆಲಸ ಕಾರ್ಯಕ್ಕೆ ತೆರಳುತ್ತಿರುತ್ತಾರೆ. ಸಮಯಕ್ಕೆ ಸರಿಯಾಗಿ ಬಾರದ ಬಸ್‌ಗಳಿಂದ ಪ್ರಯಾಣಿಕರು ಕಿತ್ತೂರ್ ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾದು ಕಾದು ಬಸವಳಿಯುತ್ತಿದ್ದಾರೆ.

ADVERTISEMENT

ಮುಂಜಾನೆ ತಡವಾಗಿ ಬಂದ ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಬಸ್ ತಡವಾಗುತ್ತಿರುವ ವಿಚಾರವನ್ನು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ‘ಸರಿಯಾದ ಸಮಯಕ್ಕೆ ಡಿಪೋದಲ್ಲಿ ಬಸ್ ಅನ್ನು ನೀಡುವುದಿಲ್ಲ. ಉತ್ತಮ ಗುಣಮಟ್ಟದ ಬಸ್ ನೀಡದ ಹಿನ್ನೆಲೆಯಲ್ಲಿ ವೇಗವಾಗಿ ಬಸ್ ಅನ್ನು ಚಾಲಕ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರಲು ಸಾಧ್ಯವಾಗುತ್ತಿಲ್ಲ ಎಂದು ಅದಕ್ಕೆ ಚಾಲಕ ಮತ್ತು ನಿರ್ವಾಹಕರು ತಿಳಿಸಿದ್ದಾರೆ.

ಕೂಡಲೇ ಘಟಕದ ಮುಖ್ಯಸ್ಥರು ಉತ್ತಮ ಗುಣಮಟ್ಟದ ಬಸ್‌ಗಳನ್ನು ಈ ಮಾರ್ಗಕ್ಕೆ ನೀಡಿದರೆ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ವಿದ್ಯಾಭ್ಯಾಸ ಮಾಡಲು ಕಾಲೇಜಿಗೆ ತೆರಳಲು ಸಹಕಾರಿಯಾಗುತ್ತದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.