ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಮರಿಗೆ ಹಿಂದೂಗಳು ಸಿಹಿ ವಿತರಿಸಿ ಸೌಹಾರ್ದತೆ ಮೆರೆದರು.
ಜಿಲ್ಲಾ ಕೇಂದ್ರದಲ್ಲಿ ನಡೆದ ಬೃಹತ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳು ಶುಭ ಹಾರೈಸಿದರು. ಹಲವೆಡೆ ಫ್ಲೆಕ್ಸ್‌ಗಳನ್ನು ಹಾಕಿ ಶುಭ ಕೋರಿದರು.
ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಮೆರವಣಿಗೆಯಲ್ಲಿ ತೆರಳುತ್ತಿದ್ದ ಮುಸ್ಲಿಮರಿಗೆ ಹಿಂದುಗಳು ಪಾನೀಯ, ಸಿಹಿತಿಂಡಿಗಳನ್ನು ಹಂಚಿ ಶುಭಾಶಯ ಕೋರಿದರು. ಇಲ್ಲಿಯೇ ಗೌರಿ ಗಣೇಶ ವಿಸರ್ಜನೋತ್ಸವ ಸಂದರ್ಭದಲ್ಲಿ ಹಿಂದೂಗಳಿಗೆ ಮಸೀದಿಯ ಮುಂಭಾಗದಲ್ಲಿ ಮುಸ್ಲಿಮರು ತಂಪು ಪಾನೀಯ, ಕೇಕು, ಸಿಹಿ ತಿಂಡಿ ಹಂಚುವುದರ ಮೂಲಕ ಸೌಹಾರ್ದ ಸಾರಿದರು.
ವಿರಾಜಪೇಟೆ ಪಟ್ಟಣದ ಮುಖ್ಯರಸ್ತೆಯ ದೊಡ್ಡಟ್ಟಿ ಚೌಕಿಯ ಬಳಿ ಈದ್ ಮೀಲಾದ್ ಮೆರವಣಿಗೆ ಬಂದಾಗ ಪಟ್ಟಣದ ಅರಸು ನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂಮರಿಗೆ ತಂಪು ಪಾನಿಯ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.