ADVERTISEMENT

ಮಡಿಕೇರಿ ರಾಜಾಸೀಟ್‌ಗೆ ಆನೆ ಬಂತೊಂದು ಆನೆ..!

ಪ್ರವಾಸಿಗರ ಸೆಳೆಯಲು ಮುಂದಾದ ತೋಟಗಾರಿಕೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 13:30 IST
Last Updated 31 ಮೇ 2019, 13:30 IST
ರಾಜಾಸೀಟ್‌ಗೆ ಬಂದಿರುವ ಆನೆ ಕಲಾಕೃತಿ
ರಾಜಾಸೀಟ್‌ಗೆ ಬಂದಿರುವ ಆನೆ ಕಲಾಕೃತಿ   

ಮಡಿಕೇರಿ: ನಗರದ ರಾಜಾಸೀಟ್‌ಗೆ ಆನೆಯೊಂದು ಬಂದಿದೆ... ಇದೇನಪ್ಪಾ ರಾಜಾಸೀಟ್‌ ಸಾಕಾನೆ ಶಿಬಿರವಾಗಿ ಬದಲಾಯಿತೇ ಎಂದು ಊಹಿಸಿಕೊಂಡಿದ್ದರೆ ತಪ್ಪು..! ಆನೆಯ ಕಲಾಕೃತಿಯೊಂದು ಉದ್ಯಾನಕ್ಕೆ ಲಗ್ಗೆಯಿಟ್ಟಿದೆ.

ಅದರ ಜತೆಗೆ ಹಲವಾರು ಕಲಾಕೃತಿಗಳ ಆಗಮನವೂ ಆಗಿದೆ. ಶುಕ್ರವಾರ ಬಂದಿರುವ ಕಲಾಕೃತಿಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಅವುಗಳ ಜೋಡಣಾ ಕಾರ್ಯವು ನಡೆಯುತ್ತಿದ್ದು ಜಿಂಕೆ ಸೇರಿದಂತೆ ಹಲವು ಬಗೆಯ ಕಲಾಕೃತಿಗಳ ಎಲ್ಲರ ಮನಸೂರೆಗೊಳ್ಳುತ್ತಿವೆ.

ತೋಟಗಾರಿಕಾ ಉದ್ಯಾನ ಯೋಜನೆ ಅಡಿಯಲ್ಲಿ ಆನಕೊಂಡ, ಜೀಬ್ರಾ, ಕಲ್ಲಿನ ಬೆಂಚಿನ ಮೇಲೆ ಕುಳಿತ ಹುಲಿ, ಜಿಂಕೆ, ಒಂಟೆ, ನವಿಲು ಕಲಾಕೃತಿಗಳು ಉದ್ಯಾನದಲ್ಲಿದ್ದವು. ಇದೀಗ ಕೆಲವು ಕಲಾಕೃತಿಗಳ ಹೊಸ ಸೇರ್ಪಡೆಯಾಗಿದೆ.ಪುಣೆಯಲ್ಲಿ ತಯಾರಾಗಿರುವ ಆನೆಯು ಈಗ ರಾಜಾಸೀಟ್‌ನ ಪ್ರಮುಖ ಆಕರ್ಷಣೆ.

ADVERTISEMENT

‘ರಾಜಾಸೀಟ್ ಸೌಂದರ್ಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಚಿಂತಿಸಿದೆ. ಅದರಂತೆ ಉದ್ಯಾನದಲ್ಲಿ ಆಸೀನರಾಗಲು ಬೆಂಚ್‌ಗಳ ಖರೀದಿ ಮಾಡಲಾಗುತ್ತಿದೆ. ಉದ್ಯಾನದ ಪಾತ್ ವೇ ದುರಸ್ತಿ, ಹೂವಿನ ಪಾತಿಗಳಿಗೆ ಕರ್ಬ್ ಸ್ಟೋನ್ಸ್ ಮತ್ತು ಗ್ರಿಲ್ಸ್ ಅಳವಡಿಕೆ ಯೋಜನೆ ರೂಪಿಸಲಾಗಿದೆ. ಜತೆಗೆ, ಗಾರ್ಡನ್‌ನ ವೀಕ್ಷಣಾ ಗೋಪುರ ದುರಸ್ತಿಗೂ ಚಿಂತಿಸಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ದೇವಕ್ಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.