ADVERTISEMENT

ಕಾಡಾನೆ ದಾಳಿ: ಫಸಲು ನಷ್ಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 7:44 IST
Last Updated 4 ನವೆಂಬರ್ 2024, 7:44 IST
ವಿರಾಜಪೇಟೆ ಸಮೀಪದ ಹೆಗ್ಗಳದ ಅಚ್ಚಪಂಡ ಎಸ್.ಅಯ್ಯಪ್ಪ ಅವರ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ ಭತ್ತದ ಫಸಲು ಮಾಡಿವೆ
ವಿರಾಜಪೇಟೆ ಸಮೀಪದ ಹೆಗ್ಗಳದ ಅಚ್ಚಪಂಡ ಎಸ್.ಅಯ್ಯಪ್ಪ ಅವರ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ ಭತ್ತದ ಫಸಲು ಮಾಡಿವೆ   

ವಿರಾಜಪೇಟೆ: ಸಮೀಪದ ಹೆಗ್ಗಳದ ಅಚ್ಚಪಂಡ ಎಸ್.ಅಯ್ಯಪ್ಪ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ ಭತ್ತದ ಫಸಲು ನಾಶ ಮಾಡಿವೆ.

ಎ.ಎಸ್.ಅಯ್ಯಪ್ಪ ಮಾತನಾಡಿ, 2023ರಲ್ಲಿ ಕಾಡಾನೆಯಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ಅರ್ಜಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಅರಣ್ಯ ಅಧಿಕಾರಿಗಳು ಪರಿಹಾರ ನೀಡಿಲ್ಲ. ನಷ್ಟದ ಪರಿಹಾರ ಕೂಡಲೇ ಒದಗಿಸುವಂತೆ ಆಗ್ರಹಿಸಿದರು.

ಗ್ರಾಮಸ್ಥ ಅಚ್ಚಪಂಡ ಮಹೇಶ್ ಮಾತನಾಡಿ, ಈಚೆಗೆ ಕೊಡಗಿನ ಹಲವೆಡೆಗಳಲ್ಲಿ ಕಾಡಾನೆ ತೋಟ ಮತ್ತು ಗದ್ದೆಗಳಿಗೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಆನೆಗಳಿಗೆ ಅರಣ್ಯದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆಹಾರ ನೀಡುವ ಗಿಡಮರ ಹೆಚ್ಚಿನ ಸಂಖ್ಯೆಯಲ್ಲಿ ನೆಡುವಂತಾಗಬೇಕು ಎಂದರು.

ADVERTISEMENT

ಅರಣ್ಯ ಇಲಾಖೆ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.