ADVERTISEMENT

ಕೊಡಗಿನಲ್ಲಿ ಮಳೆ ನಿಂತರೂ ನಿಲ್ಲದ ಕುಸಿತದ ಭೀತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:46 IST
Last Updated 11 ಜುಲೈ 2024, 6:46 IST
ಹಸಿರು ಶಿಖರದಲ್ಲಿ ನೀಲಕಂಡಿ ಜಲಪಾತ... ಮಡಿಕೇರಿ ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟಸಾಲುಗಳಿಂದ ಸುಮಾರು 300 ಅಡಿ ಎತ್ತರದಿಂದ ನೀಲಕಂಡಿ ಜಲಪಾತ ಧುಮ್ಮಿಕ್ಕುತ್ತಿದ್ದು, ದೂರದಿಂದಲೇ ಬೆಳ್ನೊರೆಯಂತೆ ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ   ಪ್ರಜಾವಾಣಿ ಚಿತ್ರ/ಸಿ.ಎಸ್.ಸುರೇಶ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ನಿಯಂತ್ರಕ್ಕೆ ಬಂದಿದೆ. ಆದರೆ, ವಿರಾಜಪೇಟೆ ಭಾಗದಲ್ಲಿ ಬುಧವಾರ ಮಳೆ ಬಿರುಸಿನಿಂದ ಸುರಿದಿರುವುದರಿಂದ ಈ ಭಾಗದಲ್ಲಿ ರಸ್ತೆ ಕುಸಿತದ ಭೀತಿ ಎದುರಾಗಿದೆ.

ವಿರಾಜಪೇಟೆ– ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟೆಯ ಬಳಿ ರಸ್ತೆಯ ಒಂದು ಬದಿ ಕುಸಿಯುವ ಹಂತದಲ್ಲಿದೆ. ಹೀಗಾಗಿ, ಜಿಲ್ಲಾಡಳಿತ ಇಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಿದೆ.

ಮಡಿಕೇರಿಯಲ್ಲಿ ತುಂತುರು ಮಳೆಯಷ್ಟೇ ಆಗಿದ್ದು, ಸಂಜೆ ಬಿಸಿಲಿನ ವಾತಾವರಣ ಕಂಡು ಬಂತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.