ADVERTISEMENT

ಸುಂಟಿಕೊಪ್ಪ; ಸಾಂಕ್ರಾಮಿಕ ರೋಗ ಹರಡುವ‌ ಭೀತಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 14:13 IST
Last Updated 19 ಮೇ 2024, 14:13 IST
ಸುಂಟಿಕೊಪ್ಪ ಜನತಾ ಕಾಲೊನಿಗೆ ತೆರಳುವ ರಸ್ತೆಯಲ್ಲಿರುವ ಹೋಟೆಲ್ ಹಿಂಭಾಗ ಸುರಿದಿರುವ ತ್ಯಾಜ್ಯ
ಸುಂಟಿಕೊಪ್ಪ ಜನತಾ ಕಾಲೊನಿಗೆ ತೆರಳುವ ರಸ್ತೆಯಲ್ಲಿರುವ ಹೋಟೆಲ್ ಹಿಂಭಾಗ ಸುರಿದಿರುವ ತ್ಯಾಜ್ಯ   

ಸುಂಟಿಕೊಪ್ಪ: ಇಲ್ಲಿನ ಮೀನು, ಮಾಂಸ ಮಾರಾಟಗಾರರ ನಿರ್ಲಕ್ಷ್ಯದಿಂದ ತ್ಯಾಜ್ಯಗಳು ಹರಡಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.

ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ‌ ಜನತಾ ಕಾಲೊನಿಯ ಬಳಿ ಮೀನು, ಮಾಂಸದ ಅಂಗಡಿಗಳು ಕಾರ್ಯಚರಿಸುತ್ತಿದ್ದು, ಅಂಗಡಿಗಳ ಅಕ್ಕಪಕ್ಕದ ಬಳಿ ಕೋಳಿ, ಕುರಿ ಮಾಂಸ, ರಕ್ತ ಹಾಗೂ ತ್ಯಾಜ್ಯದಿಂದ ನೊಣ,‌ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.

ಗ್ರಾಮ ಪಂಚಾಯಿತಿ ಆಡಳಿತ ಮಂಡಲಿ ಹಾಗೂ ಆರೋಗ್ಯ ಇಲಾಖೆ ಪರಿಸರವನ್ನು ಶುಚಿಯಾಗಿಡಬೇಕೆಂದು ಸೂಚನೆ ನೀಡಿದ್ದರೂ ಈ ಮಾಂಸದ‌ ಅಂಗಡಿಗಳ‌ ಮಾಲೀಕರು ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನತಾ ಕಾಲೊನಿಯ ನಿವಾಸಿಗಳು ಮನೆಯ ತ್ಯಾಜ್ಯಗಳನ್ನು ಪಕ್ಕದ ಹೋಟೆಲ್ ಹಿಂಭಾಗದಲ್ಲಿ ಹಾಕಿರುವುದರಿಂದ ಈ ಸ್ಥಳದಲ್ಲೂ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ‌.

ADVERTISEMENT

ಕೂಡಲೇ ಈ ಬಗ್ಗೆ ಗ್ರಾಮ ಪಂಚಾಯತಿ ಗಮನಹರಿಸಿ ಮಾಂಸದ ಅಂಗಡಿಗಳ ಮಾಲೀಕರು ಮತ್ತು ಈ ಭಾಗದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಸುಂಟಿಕೊಪ್ಪ ಗ್ರಾಮ ಪಂಚಾಯತಿಗೆ ಸೇರಿದ ಮಾಂಸದ ಅಂಗಡಿಯ ಮುಂಭಾಗದಲ್ಕಿ ಕಂಡು ಬಂದ ಕೋಳಿ ಕುರಿಯ ರಕ್ತ ಮತ್ತು ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.