ADVERTISEMENT

ಪಳಂಗಂಡ ಶಾನ್ ಸುಬ್ಬಯ್ಯಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:46 IST
Last Updated 28 ಅಕ್ಟೋಬರ್ 2024, 15:46 IST
ಶಾನ್ ಸುಬ್ಬಯ್ಯ
ಶಾನ್ ಸುಬ್ಬಯ್ಯ   

ವಿರಾಜಪೇಟೆ: ಕೊಡವ ಕೂಟಾಳಿಯಡ ಕೂಟ ಸಂಘಟನೆಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಈಚೆಗೆ ಆಯೋಜಿಸಲಾಗಿದ್ದ 4ನೇ ವರ್ಷದ ‘ಕೊಡಗ್ರ ಚುಪ್ಪಿ ಕೋಗಿಲೆ’ ಎಂಬ ಆನ್‌ಲೈನ್ ಗಾಯನ ಸ್ಪರ್ಧೆಯಲ್ಲಿ ಪಳಂಗಂಡ ಶಾನ್ ಸುಬ್ಬಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾಂಡಂಡ ಪರಿಧಿ ಪೂವಮ್ಮ ದ್ವಿತೀಯ ಸ್ಥಾನ, ತಾಪಂಡ ಹರ್ಷಿತ್ ಪೊನ್ನಪ್ಪ ಮತ್ತು ಹಂಚೆಟ್ಟಿರ ದಿಶಾ ದೇಚಮ್ಮ ತೃತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಪ್ರದರ್ಶನ ನೀಡಿದ ಮೊಣ್ಣಂಡ ಭವಿನ್ ಬೋಪಣ್ಣ, ತಾತಂಡ ದಕ್ಷ್ ಬೋಜಣ್ಣ, ಬೊಳ್ಳಚೆಟ್ಟಿರ ದಿಲೀಪ್ ಕುಮಾರ್, ಬಾಚರಣಿಯಂಡ ಚೈತ್ರಾ ಚಿಣ್ಣಮ್ಮ, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಬಲ್ಯಮೀದೇರಿರ ರೋಹನ್ ತಿಮ್ಮಯ್ಯ, ಕಾಳಿಮಾಡ ಹಿತಾ ದೇಚಮ್ಮ ಅಂತಿಮ 10 ಸ್ಪರ್ಧಿಗಳಲ್ಲಿ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಒಟ್ಟು 43 ಮಕ್ಕಳು ಭಾಗವಹಿಸಿ ಗಮನ ಸೆಳೆದರು.

ADVERTISEMENT

ಕಾಟಿಮಾಡ ಗಿರಿ ಅಯ್ಯಪ್ಪ, ಕೊಳ್ಳಿಮಾಡ ಕರುಣ್ ಪೂವಯ್ಯ, ಅಲ್ಲಾರಂಡ ಸೋಮಯ್ಯ, ಮಾಳೇಟಿರ ಲೀನಾ ಸೋಮಯ್ಯ ಅವರು ಪ್ರೋತ್ಸಾಹ ನೀಡಿದರು. ತೀರ್ಪುಗಾರರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಚೆಕ್ಕೆರ ಪಂಚಮ್ ಬೋಪಣ್ಣ ಕಾರ್ಯನಿರ್ವಹಿಸಿದರು. ಕೂಟದ ನಿರ್ದೇಶಕರಾದ ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತಾ ವಾಸುದೇವ ಅವರು ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು ಎಂದು ಕೂಟದ ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.