ADVERTISEMENT

ಗೋಣಿಕೊಪ್ಪಲು | ಅಂಬಟ್ಟಿ ಮಖಾಂ ಉರೂಸ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 6:38 IST
Last Updated 17 ಫೆಬ್ರುವರಿ 2024, 6:38 IST
ಗೋಣಿಕೊಪ್ಪಲು ಬಳಿಯ ಅಂಬಟ್ಟಿ ಉರೂಸ್ ನ ಉದ್ಘಾಟನಾ ಸಮಾರಂಭದಲ್ಲಿ ರಫೀಕ್ ಸಅದಿ ಮಾತನಾಡಿದರು. ಎ.ಎಚ್. ಶಾದುಲಿ ಎಂ.ಕೆ.ಹ್ಯಾರಿಸ್, ಖಾಲಿದ್ ಫೈಜಿ ಪಾಲ್ಗೊಂಡಿದ್ದರು.
ಗೋಣಿಕೊಪ್ಪಲು ಬಳಿಯ ಅಂಬಟ್ಟಿ ಉರೂಸ್ ನ ಉದ್ಘಾಟನಾ ಸಮಾರಂಭದಲ್ಲಿ ರಫೀಕ್ ಸಅದಿ ಮಾತನಾಡಿದರು. ಎ.ಎಚ್. ಶಾದುಲಿ ಎಂ.ಕೆ.ಹ್ಯಾರಿಸ್, ಖಾಲಿದ್ ಫೈಜಿ ಪಾಲ್ಗೊಂಡಿದ್ದರು.   

ಗೋಣಿಕೊಪ್ಪಲು: ಶೇಕ್ ವಲಿಯುಲ್ಲಾಹಿ ಅವರ ಐದು ದಿನಗಳ ಅಂಬಟ್ಟಿ ಮಖಾಂ ಉರುಸ್‌ಗೆ ಶುಕ್ರವಾರ ಚಾಲನೆ ದೊರೆಯಿತು.  ಫೆ.20ವರೆಗೆ ನಡೆಯಲಿದೆ.

ಮಖಾಂ ಆವರಣದಲ್ಲಿ ಅಂಬಟ್ಟಿ ಜಮಾತಿನ ಅಧ್ಯಕ್ಷ ಎ.ಎಚ್. ಶಾದುಲಿ ಅಧ್ಯಕ್ಷತೆ ವಹಿಸಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಜುಮ್ಮಾ ಮಸೀದಿಯ ಖತೀಬ ರಫೀಕ್ ಸಅದಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

 ಉಪಾಧ್ಯಕ್ಷ ಎಂ.ಕೆ.ಹ್ಯಾರಿಸ್, ಕೋಶಾಧಿಕಾರಿ ಖಾಲಿದ್ ಫೈಜಿ, ಆಯೋಜಕ ಸಮಿತಿ ಅಧ್ಯಕ್ಷ ಎಚ್.ತೌಸೀಫ್, ಕಾರ್ಯದರ್ಶಿ ಜುಬೇರ್ ಅಹಮದ್, ಪ್ರಮುಖರಾದ ಕೆ.ಎ.ಯುಸೂಫ್,  ಎಂ.ಕೆ.ಮುಸ್ತಫ, ಪದಾಧಿಕಾರಿಗಳಾದ ಪಿ. ಎ. ಖಾಲಿದ್, ರಜಾಕ್, ಹುಸೇನಾರ್, ಸುಹೀರ್, ಸದರ್ ಉಸ್ತಾದ್ ಅಶ್ರಫ್ ಹಳ್ರಮಿ ಭಾಗವಹಿಸಿದ್ದರು.

ADVERTISEMENT

 ವಿದ್ಯುತ್ ದೀಪ ಹಾಗೂ ಹೂಹಾರಗಳ ಅಲಂಕೃತ ಮಖಾಂನಲ್ಲಿ ಸಂದಲ್ ಕಾರ್ಯಕ್ರಮ ಸಂಜೆ ವಿಜೃಂಭಣೆಯಿಂದ ಜರುಗಿತು.

ಅಲಂಕೃತ ಅಂಬಟ್ಟಿ ಮಖಾಂನಲ್ಲಿ ನಡೆದ ಸಂದಲ್ ಕಾರ್ಯಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.