ADVERTISEMENT

ಗೋಣಿಕೊಪ್ಪಲು | ನೃತ್ಯ ಸ್ಪರ್ಧೆ: ದೀಕ್ಷಾಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 6:37 IST
Last Updated 17 ಫೆಬ್ರುವರಿ 2024, 6:37 IST
ದೀಕ್ಷಾ
ದೀಕ್ಷಾ   

ಗೋಣಿಕೊಪ್ಪಲು: ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಜಮ್ಮು ಕಾಶ್ಮೀರದ ಅಭಿನವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೆ.ಎನ್.ದೀಕ್ಷಾ  ಶಾಸ್ತ್ರೀಯ ನೃತ್ಯ (ಗುಂಪು) ಮತ್ತು ಜಾನಪದ ನೃತ್ಯ ದಲ್ಲಿ (ಗುಂಪು ) ಚಿನ್ನದ ಪದಕ ಹಾಗೂ ಶಾಸ್ತ್ರೀಯ ನೃತ್ಯದಲ್ಲಿ (ವೈಯಕ್ತಿಕ) ಕಂಚಿನ ಪದಕ ಪಡೆದುಕೊಂಡರು.

ದೀಕ್ಷಾ ಅರಮೇರಿ ಎಸ್.ಎಂ.ಎಸ್ ವಿದ್ಯಾಸಂಸ್ಥೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬಿಟ್ಟಂಗಾಲದ ಕೆ.ಎ.ನವೀನ್ ಕುಮಾರ್ ಮತ್ತು ಎ.ಎಸ್.ನಿತ್ಯಾ ದಂಪತಿಯ ಪುತ್ರಿ. ವೀರಾಜಪೇಟೆಯ ವಿಧುಷಿ ಹೇಮಾವತಿ ಕಾಂತರಾಜ್ ಅವರ ನಾಟ್ಯಂಜಲಿ ನೃತ್ಯ ಮತ್ತು ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT