ADVERTISEMENT

ಸುಂಟಿಕೊಪ್ಪದಲ್ಲಿ ಸಂಭ್ರಮದ ‘ಪೊಂಗಲ್’ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 15:23 IST
Last Updated 15 ಜನವರಿ 2024, 15:23 IST
ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ನಡೆದ ಪೊಂಗಲ್ ಆಚರಣೆಯ ಪ್ರಯುಕ್ತ ಹಾಲಿನ ಕಳಸ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು
ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ನಡೆದ ಪೊಂಗಲ್ ಆಚರಣೆಯ ಪ್ರಯುಕ್ತ ಹಾಲಿನ ಕಳಸ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು   

ಸುಂಟಿಕೊಪ್ಪ: ಇಲ್ಲಿನ ತಮಿಳು ಸಂಘದ ವತಿಯಿಂದ ಪೊಂಗಲ್ (ಮಕರ ಸಂಕ್ರಾಂತಿ) ಹಬ್ಬದ ಆಚರಣೆಯ ಅಂಗವಾಗಿ ಕಳಸ ಮೆರವಣಿಗೆ ಅತ್ಯಂತ ಶ್ರಧ್ದಾಭಕ್ತಿಯಿಂದ ಸೋಮವಾರ ನಡೆಯಿತು.

ಮಾದಾಪುರ ರಸ್ತೆಯಲ್ಲಿರುವ ವೃಕ್ಷೋಧ್ಭವ ಮಹಾಗಣಪತಿ ದೇವಾಲಯದಿಂದ ನೂರಾರು ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳು ಪೂಜೆ ನೆರವೇರಿಸಿ ಕೊಪ್ಪದ ನಾದಸ್ಚರದ ಮುಂದಾಳತ್ವದಲ್ಲಿ ಗಣಪತಿ ದೇವಾಲಯದಿಂದ ಹಾಲಿನ ಕಳಸ ಹೊತ್ತು‌ ಮೆರವಣಿಗೆ ಮೂಲಕ ಮುಖ್ಯ ಬೀದಿಯಲ್ಲಿ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಮಾಪ್ತಿಗೊಂಡಿತು.

ಇದಕ್ಕೂ ಮೊದಲು ವೃಕ್ಷೋದ್ಭವ ದೇವಾಲಯದ ಟ್ರಸ್ಟಿ ಎ.ಲೋಕೇಶ್ ಕುಮಾರ್ ಅವರು ಶಿರಕ್ಕೆ ಕಳಸ ಇಡುವ ಮೂಲಕ ಚಾಲನೆ ‌ನೀಡಿದರು.

ADVERTISEMENT

ನಂತರ, ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಅಲ್ಲಿ ದೇವಿಗೆ ಅಭಿಷೇಕ ಮಾಡಿ ನಂತರ ವಿಶೇಷ ಪೂಜಾ ಕೈಂಕಾರ್ಯಗಳನ್ನು ನಡೆಸಲಾಯಿತು. ಸೇರಿದ್ದ ಭಕ್ತ ಸಮೂಹಕ್ಕೆ ಸಮಿತಿಯಿಂದ ಪೊಂಗಲ್ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ಪೊಂಗಲ್ ಹಬ್ಬದ ಪ್ರಯುಕ್ತ ನಡೆಸಲಾದ ಮೆರವಣಿಗೆಯನ್ನು ವೃಕ್ಷೋದ್ಭವ ಮಹಾಗಣಪತಿ ದೇವಾಲಯದ ಟ್ರಸ್ಟಿ ಲೋಕೇಶ್ ಕುಮಾರ್ ಚಾಲನೆ ನೀಡಿದರು

ತಮಿಳು ಸಮಿತಿ‌ ಅಧ್ಯಕ್ಷ ಅಯ್ಯಪ್ಪ, ಗ್ರಾಮ ಪಂಚಾಯತಿ ಸದಸ್ಯ ಎಂ.ಮಂಜುನಾಥ್, ವಾಹನ ಚಾಲಕರ ಸಂಘದ ಅಧ್ಯಕ್ಷ ಸುರೇಶ, ದೊರೈ, ವಿಘ್ನೇಶ್, ಅರುಣಾ, ಸೂರ್ಯ, ಕುಶಾಲನಗರ ಪೊಂಗಲ್ ಸಮಿತಿ ಅಧ್ಯಕ್ಷ ಪಳನಿಸ್ವಾಮಿ, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಸಂಜೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾದ ವಿವಿಧ, ವಿಭಿನ್ನ ಮಾದರಿಯ ಕ್ರೀಡೆಗಳು ಹಾಗೂ ಗ್ರಾಮೀಣ‌ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ರಾತ್ರಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಸಾದ (ಪೊಂಗಲ್) ವಿತರಿಸಲಾಯಿತು.

ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ಪೊಂಗಲ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.