ADVERTISEMENT

ಸುಂಟಿಕೊಪ್ಪ: ಅನಾಥಶ್ರಮದ ವೃದ್ಧರಿಗೆ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:50 IST
Last Updated 29 ಮೇ 2023, 15:50 IST
108 ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ವತಿಯಿಂದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರುನಲ್ಲಿರುವ ವಿಕಾಸ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದಲ್ಲಿರುವ ವೃದ್ಧರ ಆರೋಗ್ಯ ತಪಾಸಣೆ ಮಾಡಲಾಯಿತು
108 ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ವತಿಯಿಂದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರುನಲ್ಲಿರುವ ವಿಕಾಸ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದಲ್ಲಿರುವ ವೃದ್ಧರ ಆರೋಗ್ಯ ತಪಾಸಣೆ ಮಾಡಲಾಯಿತು   

ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರುನಲ್ಲಿರುವ ವಿಕಾಸ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದಲ್ಲಿರುವ ವೃದ್ಧರಿಗೆ ಆರೋಗ್ಯ ತಪಾಸಣೆ ಮಾಡಿ, ಬಿಸ್ಕತ್ ಮತ್ತು ಬ್ರೆಡ್ ವಿತರಿಸಲಾಯಿತು.

108 ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಆಶ್ರಮದ ಅಧ್ಯಕ್ಷ ರಮೇಶ್  ಮಾತನಾಡಿ,  ‘108 ಗ್ರೀನ್ ಹೆಲ್ತ್ ಸೇವೆಗೆ ನಮಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸೇವೆಯಿಂದ ಆಶ್ರಮದ ಹಿರಿಯರಲ್ಲಿ ನೈತಿಕತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಇಂದಿನ ಯುವ ಜನಾಂಗ ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಹಿರಿಯರ ಸಮಸ್ಯೆಗಳು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಆಧುನಿಕ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನಾಂಗ ವಯಸ್ಸಾದವರನ್ನು ಕೀಳಾಗಿ ಕಂಡು ಮನೆಯಿಂದ ಹೊರ ಹಾಕುತ್ತಿದ್ದಾರೆ. ಇದು ಸಮಾಜಕ್ಕೆ ತಟ್ಟಿದ ಶಾಪ’ ಎಂದರು.

108 ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರ್ ಮಾತನಾಡಿ, ‘ಆಹಾರ ಮತ್ತು ಆರೋಗ್ಯದಂತಹ ಮೂಲ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವಾಗದ ಹಿಂದುಳಿದ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಆಹಾರ ಪದಾರ್ಥಗಳನ್ನು ವಿತರಿಸುವುದು ಶಿಬಿರದ ಉದ್ದೇಶವಾಗಿತ್ತು’ ಎಂದರು.

ADVERTISEMENT

ಗ್ರೀನ್ ಹೆಲ್ತ್ ಸರ್ವೀಸ್‌ನ ತಂಡವು ರಕ್ತದೊತ್ತಡ ತಪಾಸಣೆ, ಸಾಮಾನ್ಯ ದೈಹಿಕ ಪರೀಕ್ಷೆಗಳಂತಹ ಆರೋಗ್ಯ ತಪಾಸಣೆಗಳನ್ನು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮಾಲೋಚನೆಗಳನ್ನು ನೀಡಲಾಯಿತು. ಹೆಚ್ಚಿನ ಅಗತ್ಯ ಚಿಕಿತ್ಸೆಗಳ ಕುರಿತು ಅವರು ರೋಗಿಗಳಿಗೆ ಸಲಹೆ ನೀಡಿದರು.

ಇ.ಎಂ.ಟಿ ವಿನಯ್, ಅನೀಶ್ ಮತ್ತು ಚಾಲಕರಾದ ರವಿ, ಯೋಗೇಶ್ ಇದ್ದರು.

108 ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸರ್ವಿಸ್ ವತಿಯಿಂದ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರುನಲ್ಲಿರುವ ವಿಕಾಸ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದಲ್ಲಿರುವ ವೃದ್ದರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಬಿಸ್ಕತ್ ಮತ್ತು ಬ್ರೆಡ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.