ADVERTISEMENT

ಕೊಡಗು: ಭಾರಿ ಮಳೆ, ಹಾರಂಗಿಯಿಂದ 11,800 ಕ್ಯುಸೆಕ್ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 7:25 IST
Last Updated 2 ಸೆಪ್ಟೆಂಬರ್ 2024, 7:25 IST
<div class="paragraphs"><p>ಹಾರಂಗಿ ಜಲಾಶಯ&nbsp;</p></div>

ಹಾರಂಗಿ ಜಲಾಶಯ 

   

ಮಡಿಕೇರಿ: ನಗರ ಸೇರಿದಂತೆ ಸುತ್ತಮುತ್ತಲ‌‌ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾನುವಾರ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಬಿರುಸಿನ ಮಳೆಯಿಂದ ನದಿ, ತೊರೆಗಳು ಮತ್ತೆ ಉಕ್ಕಿ ಹರಿಯಲಾರಂಭಿಸಿವೆ.

ಸೋಮವಾರ ಬೆಳಿಗ್ಗೆ ಕೊಡಗಿನ ಅಲ್ಲಲ್ಲಿ ಸುರಿದ ಭಾರಿ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.

ADVERTISEMENT

ಬೆಳಿಗ್ಗೆ 8 ಗಂಟೆ ಹೊತ್ತಿಗೆ 2,362 ಕ್ಯುಸೆಕ್ ಇದ್ದ ಒಳ ಹರಿವು 11 ಗಂಟೆ ಹೊತ್ತಿಗೆ 7,800 ಕ್ಯುಸೆಕ್ ಗೆ ಏರಿಕೆಯಾಯಿತು. ಇದರಿಂದ ನದಿಗೆ 11,800 ಕ್ಯುಸೆಕ್ ನಷ್ಟು ನೀರನ್ನು ಹೊರಬಿಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.