ADVERTISEMENT

ಮಡಿಕೇರಿ | ಭಾಗಮಂಡಲದಲ್ಲಿ 21 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 6:59 IST
Last Updated 27 ಜೂನ್ 2024, 6:59 IST
<div class="paragraphs"><p>ಭಾಗಮಂಡಲದ ಭಗಂಡೇಶ್ವರ ದೇಗುಲ</p></div>

ಭಾಗಮಂಡಲದ ಭಗಂಡೇಶ್ವರ ದೇಗುಲ

   

ಮಡಿಕೇರಿ: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ 21 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಇದರಿಂದ ಈಗಾಗಲೇ ಭರ್ತಿಯಾಗಿರುವ ತ್ರಿವೇಣಿ ಸಂಗಮದಲ್ಲಿ ನೀರು ಮತ್ತಷ್ಟು ಏರಿಕೆಯಾಗಿದೆ. ಕಾವೇರಿ ಮತ್ತು ಕನ್ನಿಕೆ ನದಿಗಳು ಇಲ್ಲಿ ಭೋರ್ಗರೆಯುತ್ತಿವೆ.

ಮಡಿಕೇರಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ 15.8 ಸೆಂ.ಮೀನಷ್ಟು ಮಳೆ ಸುರಿದಿದೆ. ಸಂಪಾಜೆ ಮತ್ತು ನಾಪೋಕ್ಲು ವ್ಯಾಪ್ತಿಗಳಲ್ಲಿ ತಲಾ 13, ಪೊನ್ನಂಪೇಟೆ ಮತ್ತು ಹುದಿಕೇರಿ ಹೋಬಳಿಗಳಲ್ಲಿ ತಲಾ 12, ವಿರಾಜಪೇಟೆ ಹಾಗೂ ಆಸುಪಾಸಿನ ಪ್ರದೇಶ ಮತ್ತು ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ತಲಾ 10, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 9 ಸೆಂ.ಮೀನಷ್ಟು ಭಾರಿ ಮಳೆಯಾಗಿದೆ.

ADVERTISEMENT

ಗುರುವಾರ ಮಳೆ ಕೊಂಚ ಬಿಡುವು ನೀಡಿದ್ದರೂ, ಗಾಳಿ ಅತಿ ಜೋರಾಗಿ ಬೀಸುತ್ತಿದೆ. ದಟ್ಟ ಮೋಡಕವಿದ ವಾತಾವರಣದಿಂದ ಎಲ್ಲೆಡೆ ಮಂದ ಬೆಳಕು ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.