ADVERTISEMENT

ಏಳನೇ ಹೊಸಕೋಟೆ: ಭಾವೈಕ್ಯತೆ ಸಾರಿದ ಹಿಂದೂ- ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 16:39 IST
Last Updated 28 ಸೆಪ್ಟೆಂಬರ್ 2023, 16:39 IST
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗೆ ಹಿಂದೂಗಳು ಸಿಹಿ ಹಂಚಿ ಸಹೋದರತೆಯ ಬಾಂಧವ್ಯ ಸಾರಿದರು.
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗೆ ಹಿಂದೂಗಳು ಸಿಹಿ ಹಂಚಿ ಸಹೋದರತೆಯ ಬಾಂಧವ್ಯ ಸಾರಿದರು.   

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆ ಗ್ರಾಮದಲ್ಲಿ ಮುಸ್ಲಿಮರು ಗಣೇಶೋತ್ಸವದ ಮೆರವಣಿಗೆಯಲ್ಲಿ, ಹಿಂದೂಗಳು ಈದ್‌ ಮಿಲಾದ್‌ನ ಘೋಷಯಾತ್ರೆಯಲ್ಲಿ ತಂಪುಪಾನೀಯ, ನೀರು ವಿತರಿಸುವ ಮೂಲಕ ಭಾವೈಕ್ಯ ಮೆರೆದರು.

ಈದ್‌ ಮಿಲಾದ್‌ನ ಘೋಷಯಾತ್ರೆಯು ಗಣಪತಿ ದೇವಾಲಯದತ್ತ‌ ಆಗಮಿಸುತ್ತಿದ್ದಂತೆ ಹಿಂದೂಗಳು ತಂಪುಪಾನೀಯ, ನೀರು ನೀಡಿ ಒಬ್ಬರನ್ನೊಬ್ಬರೂ ಅಪ್ಪಿಕೊಂಡು, ಸಿಹಿ ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಗ್ರಾಮದ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯು ಮಸೀದಿಯ ಮುಂದೆ ಬಂದಾಗ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಹಿಂದೂಗಳಿಗೆ ನೀರು ಮತ್ತು‌ ತಂಪುಪಾನೀಯಗಳನ್ನು ವಿತರಿಸಿದರು.

ADVERTISEMENT

ಮುಂದಿನ ದಿನಗಳಲ್ಲೂ ಒಗ್ಗಟ್ಟಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಉಭಯ ಧರ್ಮಗಳ ಮುಖಂಡರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.