ADVERTISEMENT

ಹೋಂ–ಸ್ಟೇ ವಾಣಿಜ್ಯ ಚಟುವಟಿಕೆ ಅಲ್ಲ: ಕೊಡಗು ಡಿಸಿ ಆದೇಶ

ನಿರಾಕ್ಷೇಪಣಾ ಪತ್ರ ಪಡೆಯಲು ₹500 ಶುಲ್ಕ ನಿಗದಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:50 IST
Last Updated 20 ನವೆಂಬರ್ 2024, 5:50 IST
<div class="paragraphs"><p>ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ </p></div>

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ

   

ಮಡಿಕೇರಿ: ‘ಹೋಂ–ಸ್ಟೇಗಳನ್ನು ವಾಣಿಜ್ಯ ಚಟುವಟಿಕೆಗಳೆಂದು ಪರಿಗಣಿಸುವಂತಿಲ್ಲ’ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

‘ಕೊಡಗು ಜಿಲ್ಲೆಯಲ್ಲಿರುವ ಹೋಂ–ಸ್ಟೇಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಸ್ಥಳೀಯ ಆಡಳಿತ ಸಂಸ್ಥೆಗಳು ಅಧಿಕ ಶುಲ್ಕ ವಿಧಿಸುತ್ತಿರುವುದನ್ನು ನಿಲ್ಲಿಸಿ, ಏಕರೂಪ ಶುಲ್ಕ ಗರಿಷ್ಠ ₹500 ಹಾಗೂ ಇತರೆ ಶಾಸನಬದ್ಧ ತೆರಿಗೆಗಳನ್ನು ವಿಧಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ಗೃಹಬಳಕೆಯ ದರದಲ್ಲೇ ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕಗಳನ್ನು ವಿಧಿಸಬೇಕು. ವಸತಿ ಉದ್ದೇಶಕ್ಕಷ್ಟೇ ನಿರ್ದಿಷ್ಟಪಡಿಸಿರುವ ಆಸ್ತಿ ತೆರಿಗೆಯನ್ನು ವಿಧಿಸಬೇಕು. ಪ್ರವಾಸೋದ್ಯಮ ಇಲಾಖೆ ನೀಡಿರುವ ವ್ಯಾಖ್ಯಾನದಂತೆ ಹೋಂ–ಸ್ಟೇ ನಡೆಸುವವರು ಭೂ ಉಪಯೋಗ ಬದಲಾವಣೆಯನ್ನೂ ಕೈಗೊಳ್ಳಬೇಕಿಲ್ಲ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಹೋಂ–ಸ್ಟೇ ನಡೆಸುವ ಕಟ್ಟಡವನ್ನು ವಾಣಿಜ್ಯ ಕಟ್ಟಡವೆಂದು ಪರಿಗಣಿಸಬಾರದು ಹಾಗೂ ಹೆಚ್ಚುವರಿ ತೆರಿಗೆ ವಿಧಿಸಬಾರದು’ ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.