ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುಗ್ಗಿ ಹಬ್ಬ ‘ಹುತ್ತರಿ’ಯನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕಕ್ಕಬ್ಬೆಯ ಪಾಡಿಇಗ್ಗುತ್ತಪ್ಪ ದೇವಾಲಯದಲ್ಲಿ ಕದಿರು (ಭತ್ತದ ತೆನೆ) ತೆಗೆದ ನಂತರ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿಯೂ ಕದಿರು ತೆಗೆಯಲಾಯಿತು. ಇದಕ್ಕೂ ಮುನ್ನ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.
ಈ ಮೂಲಕ ಸಂಭ್ರಮದ ಹಬ್ಬಕ್ಕೆ ಚಾಲನೆ ಸಿಕ್ಕಿತು. ಪಟಾಕಿಗಳ ಸಿಡಿತ, ಸಿಡಿಮದ್ದುಗಳ ಮೊರೆತಗಳ ನಡುವೆ ‘ಪೊಲಿ ಪೊಲಿಯೇ ದೇವಾ’ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.