ಮಡಿಕೇರಿ: ಇಲ್ಲಿನ ಕೋಟೆ ಆವರಣದಲ್ಲಿ ಗುರುವಾರ ನಡೆದ ಸ್ವಾತಂತ್ಯೋತ್ಸವದಲ್ಲಿ ಶ್ವಾನವೊಂದು ಗಮನ ಸೆಳೆಯಿತು.
ಇಲ್ಲಿನ ಬಾಲಕರ ಬಾಲ ಮಂದಿರದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದ್ದ ವೇಳೆ ಮಕ್ಕಳು ಸಾಕಿದ್ದ ಶ್ವಾನವೊಂದು ಅವರನ್ನು ಬಿಟ್ಟಿರಲಾರದೇ ಅವರೊಡನೆ ಮೈದಾನದಲ್ಲಿತ್ತು.
ನಂತರವೂ ಪ್ರೋತ್ಸಾಹ ಬಹುಮಾನ ಪಡೆಯುವ ವೇಳೆಯೂ ಶ್ವಾನ ಅವರೊಡನೆ ಇದ್ದು ಗಮನ ಸೆಳೆಯಿತು.
ಈ ಕುರಿತು ‘ಪ್ರಜಾವಾಣಿ’ ಬಾಲಮಂದಿರದ ಸಿಬ್ಬಂದಿ ಸೂರಜ್ ಅವರನ್ನು ಸಂಪರ್ಕಿಸಿದಾಗ ಅವರು, ‘ಕಳೆದ 2 ವರ್ಷಗಳ ಹಿಂದೆ ಈ ನಾಯಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಮಂದಿರದ ಆವರಣಕ್ಕೆ ಬಂದಿತ್ತು. ಆಗ ಮಕ್ಕಳು ಆಹಾರ ನೀಡಿ ಆರೈಕೆ ಮಾಡಿದರು. ಅಂದಿನಿಂದ ಮಕ್ಕಳ ಜೊತೆಗೆ ಶಾಲೆಗೆ ಹೋಗಿ ಮತ್ತೆ ವಾಪಸ್ ಬಾಲಮಂದಿರಕ್ಕೆ ಬರುತ್ತಿದೆ. ಟಾಮಿ ಎಂದು ಮಕ್ಕಳು ಹೆಸರಿಟ್ಟಿದ್ದಾರೆ. ಈಗಲೂ ಮಕ್ಕಳ ಜೊತೆಯೆ ಕೋಟೆ ಆವರಣಕ್ಕೆ ಬಂದಿತ್ತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.