ADVERTISEMENT

ಮಡಿಕೇರಿಯ ಅಲುಫ್ ಚಾಂಪಿಯನ್

ಅಂತರರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:32 IST
Last Updated 26 ನವೆಂಬರ್ 2024, 4:32 IST
ದುಬೈಯಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ 12ನೇ ಬ್ರೈನೋ ಬ್ರೈನ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮಡಿಕೇರಿಯ ಎ.ಆರ್.ಅಲುಫ್ ಅವರೊಂದಿಗೆ ಆತನ ತಂದೆ ರಫೀಕ್, ತಾಯಿ ಸಬೀನ ಹಾಗೂ ಬ್ರೈನೋ ಬ್ರೈನ್ ಅಂತಾರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ ಇದ್ದಾರೆ

ಮಡಿಕೇರಿ: ದುಬೈಯಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ 12ನೇ ಬ್ರೈನೋ ಬ್ರೈನ್ ಚಾಂಪಿಯನ್‌ಷಿಪ್‌ನಲ್ಲಿ ಮಡಿಕೇರಿಯ ಎ.ಆರ್.ಅಲುಫ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾನೆ.

ಈ ಸ್ಪರ್ಧೆಯಲ್ಲಿ 18 ದೇಶಗಳಿಂದ 2,036 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಲುಫ್ ಅವರು ಮಾಪಂಗಡ ಕವಿತಾ ಕರುಂಬಯ್ಯ ಅವರ ಬ್ರೈನೋ ಬ್ರೈನ್ ಅಬಾಕಾಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದು, ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಐವರು ಸ್ಪರ್ಧಾರ್ಥಿಗಳ ಪೈಕಿ ಒಬ್ಬನಾಗಿ ಭಾಗವಹಿಸಿದ್ದರು.

ಅಲುಫ್ ಅವರು ಮಡಿಕೇರಿಯ ಉದ್ಯಮಿ ರಫೀಕ್ ಹಾಗೂ ಸಬೀನ ಪುತ್ರ. 9 ಪ್ರಾಯದ ಅಲುಫ್ ಮಡಿಕೇರಿಯ ಸಂತ ಮೈಕಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಯಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬ್ರೈನೋ ಬ್ರೈನ್ ಅಂತಾರಾಷ್ಟ್ರೀಯ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.