ADVERTISEMENT

ಕೊಡಗು | ಮುಂದುವರಿದ ಮಳೆ: ಕುಸಿದ ಕೆರೆ ಏರಿ, ಹಾರಂಗಿಗೆ ಒಳಹರಿವು ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 7:04 IST
Last Updated 19 ಜುಲೈ 2024, 7:04 IST
<div class="paragraphs"><p>ಕೆರೆ ಏರಿ ಒಡೆದಿರುವುದು</p></div>

ಕೆರೆ ಏರಿ ಒಡೆದಿರುವುದು

   

ಕುಶಾಲನಗರ (ಕೊಡಗು ಜಿಲ್ಲೆ): ಕೊಡಗಿನಲ್ಲಿ ಶುಕ್ರವಾರ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಕುಶಾಲನಗರ ಹೋಬಳಿಯ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಕುಸಿದು ಕೆರೆಯ ನೀರು ಜಮೀನುಗಳಿಗೆ ಹರಿಯುತ್ತಿದೆ.

ಹಾರಂಗಿ‌ ಒಳಹರಿವು ಮತ್ತಷ್ಟು ಹೆಚ್ಚಳ

ADVERTISEMENT

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕುಶಾಲನಗರದ ಹಾರಂಗಿ ಅಣೆಕಟ್ಟೆಗೆ ಅತಿಹೆಚ್ಚಿನ ನೀರು ಹರಿದು ಬರುತ್ತಿದೆ. ಈಗ ಒಳಹರಿವು 24,400 ಕ್ಯುಸೆಕ್ ಗೆ ಏರಿಕೆಯಾಗಿದೆ. ಹೀಗಾಗಿ ನದಿಗೆ ಹೊರಬಿಡುತ್ತಿರುವ ನೀರಿನ ಪ್ರಮಾಣವನ್ನು10 ಸಾವಿರ ಕ್ಯುಸೆಕ್ ನಿಂದ 15 ಸಾವಿರ ಕ್ಯುಸೆಕ್ ಗೆ ಏರಿಕೆ ಮಾಡಲಾಗಿದೆ. ನದಿ ತೀರದ ನಿವಾಸಿಗಳು ಪ್ರವಾಹಭೀತಿಗೆ ಸಿಲುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.