ADVERTISEMENT

‘ಕಸ್ತೂರಿರಂಗನ್ ವರದಿ; ಕೇರಳ ಮಾದರಿ ಅನುಸರಿಸಬೇಕಿತ್ತು’

ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 7:00 IST
Last Updated 28 ಸೆಪ್ಟೆಂಬರ್ 2024, 7:00 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ‘ಕಸ್ತೂರಿರಂಗನ್‌ ವರದಿಗೆ ಆಕ್ಷೇಪ ವ್ಯಕ್ತಪಡಿಸಿ, ಅದರ ನ್ಯೂನತೆಯನ್ನು ಸರಿಪಡಿಸುವಂಥ ಪ್ರಸ್ತಾವವನ್ನು, ಕೇರಳ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟವೂ ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು, ಸಂಪೂರ್ಣ ವರದಿಯನ್ನೇ ತಿರಸ್ಕರಿಸಿದ್ದು ಸರಿಯಲ್ಲ’ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಪ್ರತಿಪಾದಿಸಿದರು.

‘ಇಡೀ ವರದಿಯನ್ನೇ ತಿರಸ್ಕರಿಸಿದರೆ ಸುಪ್ರೀಂಕೋರ್ಟ್‌ ಒಪ್ಪುವುದಿಲ್ಲ‌. ವರದಿ ತಿರಸ್ಕರಿಸಿ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ ಎಂದು ಹೇಳುವ ರಾಜಕೀಯ ನಾಟಕವನ್ನು ರಾಜ್ಯ ಸರ್ಕಾರ ಬಿಡಬೇಕು’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT