ADVERTISEMENT

ನಾಪೋಕ್ಲು: ಕಾಳಿಂಗ ಸರ್ಪ ಸೆರೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:48 IST
Last Updated 11 ಜುಲೈ 2024, 15:48 IST

ನಾಪೋಕ್ಲು ವ್ಯಾಪ್ತಿಯ ಭಾಗಮಂಡಲ ಸಮೀಪದ ಸಣ್ಣ ಪುಲಿಕೋಟು ಗ್ರಾಮದ ಮನೆಯೊಂದರ ಬಳಿ ಗುರುವಾರ 1 ವರ್ಷದ ಹಾವು 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ.  ಗ್ರಾಮಸ್ಥರಿಂದ ವಿಷಯ ತಿಳಿದ ಮಡಿಕೇರಿಯ ಉರಗ ತಜ್ಞ ಕುಯ್ಯಮುಡಿ ಯದು ಕುಮಾರ್ ಅದನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ನಾಪೋಕ್ಲು:ಭಾಗಮಂಡಲ ಸಮೀಪದ ಸಣ್ಣ ಪುಲಿಕೋಟು ಗ್ರಾಮದ ಭಗವತಿ ಮಂದತಿರುಕೆ ದೇವಾಲಯದ ಅರ್ಚಕರ ಮನೆಯ ಬಳಿ ಕಾಳಿಂಗ ಸರ್ಪ ಗುರುವಾರ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಮಡಿಕೇರಿಯ ಉರಗ ತಜ್ಞ ಕುಯ್ಯಮುಡಿ ಯದು ಕುಮಾರ್ ಅವರಿಗೆ ಮಾಹಿತಿ ನೀಡಿದ್ದು ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು. ಒಂದು ವರ್ಷದ ಹಾವು 12 ಅಡಿ ಉದ್ದ ಇತ್ತು. ಬಳಿಕ ಸೆರೆ ಹಿಡಿದ ಹಾವನ್ನು ಅರಣ್ಯ ಇಲಾಖೆಗೆ ನೀಡಿದ್ದು ಹಾವನ್ನು ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.