ADVERTISEMENT

ವನಸಿರಿ ನಡುವೆ ಪ್ರಶಾಂತ ತಾಣ...

ಬೆಸಗೂರಿನ ಮಹದೇವರ ದೇವಾಲಯ

ಜೆ.ಸೋಮಣ್ಣ
Published 16 ಜೂನ್ 2024, 7:51 IST
Last Updated 16 ಜೂನ್ 2024, 7:51 IST
<div class="paragraphs"><p>ಗೋಣಿಕೊಪ್ಪಲು ಬಳಿಯ ಬೆಸಗೂರಿನ ಮಹದೇವರ ದೇವಸ್ಥಾನ</p></div>

ಗೋಣಿಕೊಪ್ಪಲು ಬಳಿಯ ಬೆಸಗೂರಿನ ಮಹದೇವರ ದೇವಸ್ಥಾನ

   

ಗೋಣಿಕೊಪ್ಪಲು: ಕಾಫಿ ತೋಟದ ನಡುವೆ ಸುಣ್ಣ ಬಣ್ಣಗಳಿಂದ ಅಲಂಕೃತ ಗೊಂಡು ಭಕ್ತರನ್ನು ಭಾವಪೂರ್ಣವಾಗಿ ಆಕರ್ಷಿಸುವ ಸುಂದರ ಆಲಯಗಳಲ್ಲಿ ಬೆಸಗೂರಿನ ಮಹದೇವರ ದೇವಸ್ಥಾನವೂ ಒಂದು.

ಸುತ್ತಲೂ ಇರುವ ಹಚ್ಚಹಸುರಿನ ವನಸಿರಿಯ ನಡುವೆ 700 ವರ್ಷಗಳ ಇತಿಹಾಸ ಹೊಂದಿರುವ ಮಹದೇವರ ದೇವಾಲಯ ಕಣ್ಮನ ಸೆಳೆಯುತ್ತಿದೆ. ಇಲ್ಲಿ ಮಹದೇವರ ಗುಡಿಯ ಜತೆಗೆ ಗಣತಿ, ದುರ್ಗಿ, ಭದ್ರಕಾಳಿ, ಬಾಲಕೃಷ್ಣನ ಗುಡಿಗಳಿವೆ. ಇವುಗಳೆಲ್ಲೆಲ್ಲ ಮಹದೇವರ ಗುಡಿಯೇ ಪ್ರಧಾನವಾದದು.

ADVERTISEMENT

ಪ್ರತಿ ವರ್ಷ ಮೇ 8ರಂದು ಈ ದೇವಸ್ಥಾನದ ವಾರ್ಷಿಕೋತ್ಸವ ನಡೆಯುತ್ತದೆ. ದೀಪಾವಳಿ ಮುಗಿದ ಮೇಲೆ ಒಂದು ತಿಂಗಳ ಕಾಲ ಪ್ರತಿ ಸೋಮವಾರ ಕಾರ್ತಿಕ ಪೂಜೆಯೂ ನಡೆಯುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಊರುಗಳಾದ ನಲ್ಲೂರು, ಕಿರುಗೂರು, ಪೊನ್ನಪ್ಪಸಂತೆ, ಕಾನೂರು, ಬೆಕ್ಕೆಸೊಡ್ಲೂರು, ಬಾಳೆಲೆ, ಕೋಣನಕಟ್ಟೆ ಮತ್ತೂರು ಮೊದಲಾದ ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಾರೆ.

ಇಲ್ಲಿನ ಗುಡಿಗೋಪುರಗಳು ಸಾಮಾನ್ಯ ಕಟ್ಟಡದಿಂದ ಕೂಡಿದ್ದು ಸರಳವಾಗಿ, ಸುಂದರವಾಗಿವೆ. ದೇವಸ್ಥಾನದ ಆವರಣದೊಳಗೆ ಬೇವು, ನೆಲ್ಲಿ, ಸಂಪಿಗೆ, ಮಾವು ಬಿಲ್ವಪತ್ರೆ ಮೊದಲಾದ ಹಲವು ಜಾತಿಯ ಮರಗಳಿವೆ. ಗುಡಿಗಳ ಅಕ್ಕಪಕ್ಕ ವಿವಿಧ ಜಾತಿಯ ಹೂ ಗಿಡಗಳು ಮತ್ತು ಅಲಂಕಾರಿಕಾ ಸಸ್ಯಗಳನ್ನು ಅಚ್ಚುಕಟ್ಟಾಗಿ ಬೆಳೆಸಲಾಗಿದೆ.

ಆಯಾ ದೇವರಗುಡಿಗಳ ಮುಂಭಾಗದಲ್ಲಿ ಕಮಾನುಗಳನ್ನು ನಿರ್ಮಿಸಲಾಗಿದೆ. ನೀರಿಗಾಗಿ ತೆರೆದ ಬಾವಿ ನಿರ್ಮಿಸಲಾಗಿದೆ. ಈ ಬಾವಿ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಲಾಗಿದೆ. ದೇವಸ್ಥಾನ ಕಟ್ಟಡ ಮತ್ತು ಕಾಂಪೌಂಡ್‌ಗೆ ಕೇವಲ ಬಿಳಿ ಬಣ್ಣ ಮತ್ತು ನೀಲಿ ಬಣ್ಣ ಬಳೆಯಲಾಗಿದೆ.

ಪ್ರತಿ ದಿನ ಬೆಳಿಗ್ಗೆ 6.30ರಿಂದಪೂಜೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರೆ ಈ ಸಮಯವನ್ನು ವಿಸ್ತರಿಸಲಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಪುರೋಹಿತರಾದ ಜಗನ್ನಾಥ್ ಭಟ್.

ಈ ದೇವಸ್ಥಾನಕ್ಕೆ ಸ್ಥಳೀಯಭಕ್ತರಿಗಿಂತ ಹೊರಗಿನವರೇ ಹೆಚ್ಚು. ದೇವಸ್ಥಾನದಲ್ಲಿ ಮೈಕ್ ಹಾಗೂ
ಗಂಟೆ ಜಾಗಟೆಗಳ ಗದ್ದಲವಿಲ್ಲ.ಪ್ರಶಾಂತವಾದ ವಾತಾವರಣದಲ್ಲಿ ಭಕ್ತರು ತಮ್ಮ ಕಷ್ಟ ಸುಖಗಳನ್ನು ನಿವೇದಿಸಿಕೊಂಡು, ಭಕ್ತಿಭಾವದಿಂದ ಹರಕೆ ತೀರಿಸಿ ವಿನೀತರಾಗಿ
ತೆರಳುತ್ತಾರೆ.

ದೇವಸ್ಥಾನದಲ್ಲಿಲ್ಲ ಗದ್ದಲ, ಶಬ್ದಮಾಲಿನ್ಯ ಪ್ರಶಾಂತ ಪರಿಸರದಲ್ಲಿ ಪ್ರಾರ್ಥನೆಗೆ ಹೇಳಿ ಮಾಡಿಸಿದ ಸ್ಥಳ ಶಾಂತಿಯೇ ಇಲ್ಲಿನ ಉಸಿರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.