ADVERTISEMENT

ಕೊಡಗಿನಲ್ಲಿ ರಾತ್ರಿ ಬಿಡುವು ನೀಡಿದ ಮಳೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 4:51 IST
Last Updated 31 ಜುಲೈ 2024, 4:51 IST
   

ಮಡಿಕೇರಿ: ಸೋಮವಾರ ಮತ್ತು ಮಂಗಳವಾರ ಸದಾ ಸುರಿಯುತ್ತಲೇ ಇದ್ದ ಮಳೆ ಮಂಗಳವಾರ ರಾತ್ರಿಯಿಂದ ಬಿಡುವು ನೀಡಿದೆ. ಆದರೆ ಕವಿದಿರುವ ದಟ್ಟ ಮೋಡಗಳು, ಆವರಿಸಿರುವ ಅಪಾರ ಹಿಮ, ಜಿನುಗುತ್ತಿರುವ ಹನಿಗಳು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಘೋಷಣೆ ಜನರ ಆತಂಕವನ್ನು ಇನ್ನೂ ದೂರ ಮಾಡಿಲ್ಲ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಇಂದು (ಜುಲೈ 31) ಶಾಲಾ ಕಾಲೇಜುಗಳಿಗೆ ರಜೆ‌ ನೀಡಿದೆ. 5 ಕಾಳಜಿ ಕೇಂದ್ರಗಳಲ್ಲಿ 119 ಮಂದಿಯನ್ನು ಇರಿಸಲಾಗಿದೆ‌.

ಮಳೆ ಕಡಿಮೆಯಾಗಿರುವುದರಿಂದ ಭಾಗಮಂಡಲ–ಮಡಿಕೇರಿ ರಸ್ತೆಯಲ್ಲಿ ನೀರು ಕಡಿಮೆಯಾಗಿದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 9,098 ಕ್ಯುಸೆಕ್‌ಗೆ ತಗ್ಗಿದೆ. 27,500 ಇದ್ದ ಹೊರ ಹರಿವಿನ ಪ್ರಮಾಣವನ್ನು 19,250 ಕ್ಯುಸೆಕ್‌ಗೆ ಇಳಿಕೆ ಮಾಡಲಾಗಿದೆ.

ADVERTISEMENT

ಇಂದು ಜುಲೈ 31ರಂದು ಮಧ್ಯಾಹ್ನದ ವೇಳೆ ಜಿಲ್ಲೆಯನ್ನು ತಲುಪಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಲಿದ್ದು, ಇಲ್ಲಿಯೇ ತಂಗಲಿದ್ದಾರೆ. ಮತ್ತೆ ಗುರುವಾರವೂ ಅವರು ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.