ADVERTISEMENT

ಮಡಿಕೇರಿ: 9ರಂದು ಕೊಡವ ಅಂತರ ಕೇರಿ ಜಾನಪದ ಸಾಂಸ್ಕೃತಿಕ ಮೇಳ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 4:27 IST
Last Updated 7 ನವೆಂಬರ್ 2024, 4:27 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಮಡಿಕೇರಿ: 7ನೇ ಕೊಡವ ಅಂತರ ಕೇರಿ ಜಾನಪದ ಸಾಂಸ್ಕೃತಿಕ ಮೇಳವು ಇಲ್ಲಿನ ಸುಬ್ರಹ್ಮಣ್ಯನಗರದ ಸುಬ್ರಹ್ಮಣ್ಯ ಕೊಡವ ಕೇರಿ ನೇತೃತ್ವದಲ್ಲಿ ಹಾಗೂ ಕೊಡವ ಸಮಾಜದ ಸಹಯೋಗದಲ್ಲಿ ನ. 9ರಂದು ಇಲ್ಲಿನ ಕೊಡವ ಸಮಾಜದ ಆವರಣದಲ್ಲಿ ನಡೆಯಲಿದ್ದು, ಇಲ್ಲಿನ 12 ಕೇರಿಯ ಕೊಡವ ಜನಾಂಗದವರು ಇದರಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

‘ಅಂದು ಬೆಳಿಗ್ಗೆ 8.45ಕ್ಕೆ ಸುಬ್ರಹ್ಮಣ್ಯ ಕೇರಿಯ ಸದಸ್ಯರಾದ ನಂದೇಟ್ಟಿರ ಗೌರಮ್ಮ ಮುತ್ತಪ್ಪ ಅವರು ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ ನೀಡಲಿದ್ದಾರೆ. ನಂತರ, ಕೇರಿ ಕೇರಿಗಳ ನಡುವೆ ಬೊಳಕಾಟ್, ಕೋಲಾಟ್, ಮಹಿಳೆಯರ ಉಮ್ಮತಾಟ್, ಕಪ್ಪೆಯಾಟ್, ಬಾಳೋಪಾಟ್, ತಾಲಿಪಾಟ್, ಸಮ್ಮಂದ ಅಡ್‌ಕುವೊ, ವಾಲಗತಾಟ್, ಕೊಡವ ಹಾಡು ಹೀಗೆ ನಾನಾ ಬಗೆಯ ಸ್ಪರ್ಧೆಗಳು ನಡೆಯಲಿವೆ’ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ, ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗಾಂಡ ಎಸ್.ದೇವಯ್ಯ, ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಭಾಗವಹಿಸಲಿದ್ದಾರೆ ಎಂದು ಅಂತರಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ.ನಾಣಯ್ಯ ಹೇಳಿದರು.

ಹಿರಿಯರಾದ ಪುಲಿಯಂಡ ಕೆ.ಮಾದಪ್ಪ, ಬಾಚಂಗಡ ಕೆ.ಸೀತಮ್ಮ, ಕ್ರೀಡೆಯಲ್ಲಿ ಸಾಧನೆ ಮಾಡಿರುವ ತಾತಪಂಡ ಜ್ಯೋತಿ ಸೋಮಯ್ಯ, ಹಾಗೂ ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭದ ನಂತರ ಮನರಂಜನಾ ಕಾರ್ಯಕ್ರಮಗಳೂ ಇರಲಿದ್ದು, ಗಾಯಕ ಮಾಳೇಟಿರ ಅಜಿತ್ ಮತ್ತು ಅವರ ತಂಡದಿಂದ ಕೊಡವ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಾಜದ ಮುಖಂಡರಾದ ಅರೆಯಡ ಪಿ.ರಮೇಶ್, ಕಿರಣ್ ಮುತ್ತಣ್ಣ, ಬೊಪ್ಪಂಡ ಸರಳ ಕರುಂಬಯ್ಯ, ನಾಟೋಳಂಡ ಪ್ರಕಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.