ADVERTISEMENT

ನಾಪೋಕ್ಲು: ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ; ಇಂದು ಫೈನಲ್

ಶನಿವಾರ 101 ಕೊಡವ ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 6:00 IST
Last Updated 21 ಏಪ್ರಿಲ್ 2024, 6:00 IST
ನಾಪೋಕ್ಲುವಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯವೊಂದರ ದೃಶ್ಯ
ನಾಪೋಕ್ಲುವಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯವೊಂದರ ದೃಶ್ಯ   

ನಾಪೋಕ್ಲು: ಲೇ..ಲೇ..ಲೈಸಾ..ಬಲಿರಾ..ಬಲಿರಾ..ಇವು ಇಲ್ಲಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಕೇಳಿ ಬಂದ ಕ್ರೀಡಾ ಕಲರವ.

ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ 3ನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಕ್ರೀಡಾಕೂಟದಲ್ಲಿ ಒಟ್ಟು 236 ತಂಡಗಳು ಸ್ಪರ್ಧಿಸಿದ್ದು ಶನಿವಾರ 101 ಕೊಡವ ತಂಡಗಳು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ತಂಡಗಳ ಬಲ ಪ್ರದರ್ಶನ ನಡೆಸಿದವು.

ಭಾನುವಾರ ಮಹಿಳೆಯರಿಗೆ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಪುರುಷರಿಗೆ ಕ್ವಾಟರ್ ಫೈನಲ್, ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ.

ADVERTISEMENT

ಮಹಿಳಾ ವಿಭಾಗದಲ್ಲಿ ಪುದಿಯೋಕ್ಕಡ, ಚೊಟ್ಟೆಯಂಡಮಾಡ, ಕಾಂಡಂಡ, ಪಟ್ರಪಂಡ, ಅಜ್ಜಮಾಡ, ನಾಪಂಡ ತಂಡಗಳು ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಪುರುಷರ ವಿಭಾಗದಲ್ಲಿ ಬಾದುಮಂಡ, ಪಟ್ರಪಂಡ, ಅಲ್ಲುಮಾಡ, ಮಾಚಿಮಂಡ ತಂಡಗಳು ಮುನ್ನಡೆ ಸಾಧಿಸಿವೆ.

ಮಹಿಳಾ ತಂಡದಲ್ಲಿ ಕಳೆದ ವರ್ಷ ವಿಜೇತರಾದ ಅನ್ನಾಲಮಡ ತಂಡವನ್ನು ಬಲಮುರಿಯ ಬೊಳ್ಳಚೆಟ್ಟಿರ ತಂಡ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ತಮ್ಮ ತಂಡಗಳ ಬೆಂಬಲಿಗರಾಗಿ ಬಂದ ವೀಕ್ಷಕರ ಉದ್ಘೋಷದ ನಡುವೆ ಕ್ರೀಡಾಕೂಟದಲ್ಲಿ ಶ್ರೀನಿವಾಸ್, ಬಾಳೆಯಡ ದಿವ್ಯ ಮಂದಪ್ಪ, ಮುಂಡಚಾಡಿರ ರೀನಿ ವೀಕ್ಷಕ ವಿವರಣೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.