ಕುಶಾಲನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಅವರು ಕುಶಾಲನಗರ-ಹಾರಂಗಿ ಮಾರ್ಗದ ಸಾರಿಗೆ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದರು.
ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕರು ಬಸ್‌ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬೆಳಗ್ಗೆ 9.30 ಗಂಟೆಗೆ ಕುಶಾಲನಗರದಿಂದ ಹೊರಟು ಹಾರಂಗಿ ವರೆಗೆ ಸಂಚರಿಸಿ, ನಂತರ ಹಿಂತಿರುಗಲಿದೆ. ಇದರಿಂದ ಗುಮ್ಮನಕೊಲ್ಲಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಕಾಂಬಿಕಾ ಪಿಯು ಕಾಲೇಜು, ಪ್ರೌಢಶಾಲೆ ಹಾಗೂ ಕ್ರೈಸ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಅಧಿಕ ಹಣ ನೀಡಿ ಆಟೊ ರಿಕ್ಷಾದಲ್ಲಿ ಹೋಗುತ್ತಿದ್ದ ಹಾರಂಗಿ, ಅತ್ತೂರು, ಸುಂದರನಗರ, ಚಿಕ್ಕತ್ತೂರು ಭಾಗದ ಗ್ರಾಮಸ್ಥರಿಗೂ ಅನುಕೂಲವಾಗಿದೆ.
ಕುಶಾಲನಗರದಿಂದ ಹಾರಂಗಿ ಮಾರ್ಗವಾಗಿ ಗುಡ್ಡೆಹೊಸೂರು ಮೂಲಕ ಸಂಚಾರಿಸಲು ಅನೇಕ ಖಾಸಗಿ ಬಸ್ ಗಳು ಆರ್‌ಟಿಒ ದಿಂದ ರಹದಾರಿ ಪಡೆದಿದ್ದರೂ ಕೂಡ ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಸಂಚಾರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಶಶಿಧರ್, ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಮುಖಂಡರಾದ ಜೋಸೆಫ್ ವಿಕ್ಟರ್ ಸೋನ್ಸ್, ಶಿವಶಂಕರ್, ಕಿರಣ್, ರಂಜನ್ ಹೆಬ್ಬಾಲೆ ಕಾಲೇಜು ಉಪ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.