ADVERTISEMENT

ನಾಟಿ ವೈದ್ಯೆಗೆ ಕಾಯಕ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:31 IST
Last Updated 9 ಜುಲೈ 2024, 14:31 IST
ನಾಟಿವೈದ್ಯ ಅಯಿನಮಂಡ ಲೀಲಾವತಿ ಗಣಪತಿ
ನಾಟಿವೈದ್ಯ ಅಯಿನಮಂಡ ಲೀಲಾವತಿ ಗಣಪತಿ   

ಕುಶಾಲನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಕುಶಾಲನಗರದ ಮಾದಪಟ್ಟಣ ಗ್ರಾಮದ ನಾಟಿ ವೈದ್ಯೆ ಅಯಿನ ಮಂಡ ಲೀಲಾವತಿ ಗಣಪತಿ ಅವರು ಭಾಜನರಾಗಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.

ಕಳೆದ 60 ಕ್ಕೂ ಅಧಿಕ ವರ್ಷಗಳಿಂದ ನಾಟಿ ಔಷಧಿ ನೀಡುವ ಮೂಲಕ ಜಿಲ್ಲೆ ಮತ್ತು ನೆರೆ ಜಿಲ್ಲೆಗಳ ಮಕ್ಕಳಿಗೆ ಬಾಲ ಸಂಜೀವಿನಿ ಆಗಿರುವ ಲೀಲಾವತಿ ಗಣಪತಿ (ಕೊಡಗರಮ್ಮ) ಅವರನ್ನು ಕಾಯಕ ರತ್ನ ಪ್ರಶಸ್ತಿ ಗೆ ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ ಎಂದು  ಪರಿಷತ್

ಜುಲೈ 13 ರಂದು ಬೀದರ್ ಜಿಲ್ಲೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯದ ಒಟ್ಟು 35 ಮಂದಿ ಸಾಧಕರಿಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು  ಪರಿಷತ್ ಜಿಲ್ಲಾ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.