ADVERTISEMENT

ಸೋಮವಾರಪೇಟೆ: ಚಿರತೆಯ ಹೆಜ್ಜೆ ಗುರುತು ಪತ್ತೆ, ಸ್ಥಳೀಯರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:45 IST
Last Updated 6 ನವೆಂಬರ್ 2024, 5:45 IST
ಸೋಮವಾರಪೇಟೆ ಪಟ್ಟಣದ ಜನವಸತಿ ಪ್ರದೇಶವಾದ ಹೊಸ ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ಚಿರತೆ ಹೆಜ್ಜೆ ಪತ್ತೆಯಾಗಿರುವುದು
ಸೋಮವಾರಪೇಟೆ ಪಟ್ಟಣದ ಜನವಸತಿ ಪ್ರದೇಶವಾದ ಹೊಸ ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ಚಿರತೆ ಹೆಜ್ಜೆ ಪತ್ತೆಯಾಗಿರುವುದು   

ಸೋಮವಾರಪೇಟೆ: ಪಟ್ಟಣದ ಜನವಸತಿ ಪ್ರದೇಶವಾದ ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆಯಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿರುವ ಶಂಕೆ ಇದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಈಡಾಗಿದ್ದಾರೆ.

ಬಡಾವಣೆಯ ಒಂದು ಬದಿಯಲ್ಲಿ ಕಾಡು ಪ್ರದೇಶವಿದ್ದು, ಇಲ್ಲಿ ಚಿರತೆಯ ಹೆಜ್ಜೆ ಪತ್ತೆಯಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

‘ಮೂರು ದಿನಗಳಿಂದಲೂ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿರುವ ಅನುಮಾನವಿದೆ. ರಾತ್ರಿ ಹಾಗೂ ಬೆಳಿಗ್ಗೆ ನಾಯಿಗಳು ಬೊಗಳುತ್ತಿರುತ್ತವೆ. ಹೊಸ ಬಡಾವಣೆಯ ಕೆಳಭಾಗದಲ್ಲಿ ಪಂಚಾಯಿತಿಯಿಂದ ಸೂಕ್ತ ಬೀದಿ ದೀಪಗಳ ವ್ಯವಸ್ಥೆಯನ್ನೂ ಮಾಡಿಲ್ಲ. ಕತ್ತಲ ಸಮಯದಲ್ಲಿ ಮನೆಯಿಂದ ಹೊರಬರಲೂ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಮಕ್ಕಳು, ವೃದ್ಧರು ಭಯದಿಂದ ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.