ADVERTISEMENT

ಕೊಡಗು ಜಿಲ್ಲೆಯ ವಿವಿಧೆಡೆ ಭಾಗಶಃ ಚಂದ್ರಗ್ರಹಣ ಗೋಚರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:17 IST
Last Updated 9 ನವೆಂಬರ್ 2022, 6:17 IST
ಕುಶಾಲನಗರದಲ್ಲಿ ಮಂಗಳವಾರ ಸಂಜೆ ಕಂಡುಬಂದ ಭಾಗಶಃ ಚಂದ್ರಗ್ರಹಣದ ದೃಶ್ಯ.
ಕುಶಾಲನಗರದಲ್ಲಿ ಮಂಗಳವಾರ ಸಂಜೆ ಕಂಡುಬಂದ ಭಾಗಶಃ ಚಂದ್ರಗ್ರಹಣದ ದೃಶ್ಯ.   

ಕುಶಾಲನಗರ: ಜಿಲ್ಲೆಯ ವಿವಿಧೆಡೆ ನಾಗರಿಕರು ಖಗೋಳದ ಕೌತುಕ ಚಂದ್ರಗ್ರಹಣವನ್ನು ಮಂಗಳವಾರ ಸಂಜೆ ವೀಕ್ಷಿಸಿ, ಆನಂದಿಸಿದರು.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಜೆ 5.55 ರಿಂದ 6.20 ರವರೆಗೆ ಭಾಗಶಃ ಚಂದ್ರಗ್ರಹಣ ಗೋಚರಿಸಿತು.
ಜಿಲ್ಲೆಯ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

‘ಯಾವುದೇ ಗ್ರಹಣ ಸಂಭವಿಸಿದಾಗ ಅಧ್ಯಯನ, ಸಂಶೋಧನೆಗೆ ಗ್ರಹಣ ಪ್ರೇರಣೆಯಾಗಬೇಕೇ ವಿನಃ ಇಲ್ಲಸಲ್ಲದ ಮೌಢ್ಯ, ಅಂಧಾಚರಣೆಗೆ ನಾಂದಿಯಾಗಬಾರದು’ ಎಂದು ಹವ್ಯಾಸಿ ಖಗೋಳ ವೀಕ್ಷಕರಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್ ತಿಳಿಸಿದರು.

ADVERTISEMENT

‘ಖಗೋಳಾಸಕ್ತರು ಎತ್ತರದ ಬಯಲು ಪ್ರದೇಶ, ಮೈದಾನ ಮತ್ತು ಮನೆಗಳ ಮಹಡಿ ಮೇಲೆ ನಿಂತು ಚಂದ್ರಗ್ರಹಣ ವೀಕ್ಷಿಸಿ ಆನಂದಿಸಿದರು’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ತಿಳಿಸಿದರು.

ಅಪರೂಪದ ಚಂದ್ರಗ್ರಹಣವನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಸಕ್ತಿ ಹಾಗೂ ಕುತೂಹಲದಿಂದ ವೀಕ್ಷಿಸಿದರು.

ಜಿಲ್ಲೆಯ ಕೆಲವು ಕಡೆ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಂದ್ರಗ್ರಹಣ ಅಷ್ಟಾಗಿ ಗೋಚರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.