ADVERTISEMENT

ಮಡಿಕೇರಿ: ‘ಬೆಳಕಿನ ದಸರೆ’ಗೆ ತೆರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 16:25 IST
Last Updated 12 ಅಕ್ಟೋಬರ್ 2024, 16:25 IST
   

ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿಯ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಸಾಗಿದ ಮಂಟಪಗಳನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ನವರಾತ್ರಿಯ ಉತ್ಸವಕ್ಕೆ ಸಂಭ್ರಮದ ತೆರೆ ಎಳೆದರು.

ಮೈಸೂರು ದಸರೆ ಮುಗಿಯುತ್ತಿದ್ದಂತೆ ಇಲ್ಲಿ ಆರಂಭವಾದ 10 ಮಂಟಪಗಳ ಶೋಭಾಯಾತ್ರೆಗೆ ಇಲ್ಲಿನ ಪೇಟೆ ಶ್ರೀರಾಮಮಂದಿರದ ಮಂಟಪವು ಮುನ್ನುಡಿ ಬರೆಯಿತು. 150ಕ್ಕೂ ಅಧಿಕ ವರ್ಷಗಳಷ್ಟು ಸುದೀರ್ಘ ಕಾಲದಿಂದ ವಿಜಯದಶಮಿಯಂದು ಮೆರವಣಿಗೆ ಯಲ್ಲಿ ಭಾಗಿಯಾಗುತ್ತಿ ರುವ ಈ ದೇಗುಲದ ಮಂಟಪ ‘ವಿಷ್ಣುವಿನ ಮತ್ಸ್ಯಾವತಾರ’ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು. ವರ್ಣಮಯ ಮಂಟಪಗಳನ್ನು ನೋಡುತ್ತಾ ಹಲವರು ಮೈಮರೆತು ನರ್ತಿಸಿದರು. ಮಂಟಪಗಳಲ್ಲಿ
ಪ್ರದರ್ಶನಗೊಂಡ ಪೌರಾಣಿಕ ಕಥೆಗಳನ್ನು ಕುತೂಹಲದಿಂದ ವೀಕ್ಷಿಸಿ ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT