ADVERTISEMENT

ಕ್ರೀಡೆಯಿಂದ ಸಾಮರಸ್ಯ ಸಾಧ್ಯ: ಶಾಸಕ ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 11 ಮೇ 2024, 13:19 IST
Last Updated 11 ಮೇ 2024, 13:19 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯ  ಪ್ರೌಢ ಶಾಲಾ ಮೈದಾನದಲ್ಲಿ  ಮೇದ ಸಮುದಾಯದ  4ನೇ ವರ್ಷದ ಪುರುಷರ ಕ್ರಿಕೆಟ್, ಮಹಿಳೆಯರ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ನಾಪೋಕ್ಲು ಸಮೀಪದ ಕಕ್ಕಬ್ಬೆಯ  ಪ್ರೌಢ ಶಾಲಾ ಮೈದಾನದಲ್ಲಿ  ಮೇದ ಸಮುದಾಯದ  4ನೇ ವರ್ಷದ ಪುರುಷರ ಕ್ರಿಕೆಟ್, ಮಹಿಳೆಯರ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.   

ನಾಪೋಕ್ಲು: ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಸಮಚಿತ್ತರಾಗಲು ಸಾಧ್ಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಸಮೀಪದ ಕಕ್ಕಬ್ಬೆಯ ಪ್ರೌಢ ಶಾಲಾ ಮೈದಾನದಲ್ಲಿ ಮೇದ ಸಮುದಾಯದ 4 ನೇ ವರ್ಷದ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗೆ ಪೋಷಕರು ಪ್ರೋತ್ಸಾಹಿಸಬೇಕು. ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಉತ್ತಮ ಬೆಳವಣಿಗೆ, ಸಮುದಾಯಗಳ ಸಾಮರಸ್ಯಕ್ಕೆ ಕಾರಣವಾಗುತ್ತದೆ ಎಂದರು.

ಪಾಡಿಕಾರ ಕುಟುಂಬದ ಹಿರಿಯ ವ್ಯಕ್ತಿ ಎಂ.ಟಿ.ದಾಸಪ್ಪ  ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೊಂಗೇರ ಶಿಲ್ಪ ಲೋಕೇಶ್, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಪ್ರಮುಖರಾದ ಕಲಿಯಂಡ ಸಂಪನ್ ಅಯ್ಯಪ್ಪ, ಬುಡಕಟ್ಟು ಸಮುದಾಯದ ಅಧ್ಯಕ್ಷ ಕುಡಿಯರ ಮುತ್ತಪ್ಪ,ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾಪಾಳರ ತಮ್ಮಯ್ಯ, ಕಾಪಾಳರ ಪ್ರಕಾಶ್, ನಾಲ್ನಾಡ್ ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.