ADVERTISEMENT

ಸೌದಿ ಅರೇಬಿಯಾದಲ್ಲಿ ಮಿಲಾದ್ ಸಂಗಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 16:08 IST
Last Updated 30 ಅಕ್ಟೋಬರ್ 2023, 16:08 IST
ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಂನಲ್ಲಿ ಈಚೆಗೆ ನಡೆದ ಮಿಲಾದ್ ಸಮಾವೇಶದಲ್ಲಿ ಕೊಂಡಂಗೇರಿಯ ಮರ್ಕಝುಲ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಮಾತನಾಡಿದರು
ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಂನಲ್ಲಿ ಈಚೆಗೆ ನಡೆದ ಮಿಲಾದ್ ಸಮಾವೇಶದಲ್ಲಿ ಕೊಂಡಂಗೇರಿಯ ಮರ್ಕಝುಲ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಮಾತನಾಡಿದರು   

ನಾಪೋಕ್ಲು: ಕೊಡಗಿನ ಸುನ್ನಿ ಪ್ರವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುವ ಮಿಲಾದ್ ಸಮಾವೇಶ ಈಚೆಗೆ ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಂನಲ್ಲಿ ನಡೆಯಿತು.

ಬುರ್ದಾ ಮತ್ತು ಮೌಲಿದ್ ನಡೆದ ಬಳಿಕ ಹಂಸ ಮುಸ್ಲಿಯಾರ್ ಮಾಪಿಳತ್ತೋಡು ಅವರು ವಿಶೇಷ ಪ್ರಾರ್ಥನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಹಾಗೂ ಮಿಲಾದ್ ಸಮಾವೇಶ ನಡೆಯಿತು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮರ್ಕಝುಲ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಉದ್ಘಾಟಿಸಿದರು.

ADVERTISEMENT

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಮರ್ಕಝುಲ್ ಹಿದಾಯ ಪ್ರಧಾನ ಅಧ್ಯಾಪಕ ಅಸ್ಕರ್ ಸಖಾಫಿ ಖುರಾನ್ ಖಿರಾಅತ್ ಪಠಿಸಿದರು.

ಕಾರ್ಯಕ್ರಮದಲ್ಲಿ ಮಹಮ್ಮದಲಿ ಸಖಾಫಿ ಒಳಮದಿಲ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಂಸ ಮಾನಿ ಕುಂಜಿಲ ಮಾತನಾಡಿದರು. ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್) ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇಸಿ ಕಾರ್ಗೋ ಮಾಲೀಕರಾದ ಅಶ್ರಫ್ ಎಮ್ಮೆಮಾಡು, ದಾರುನ್ನಜಾತ್ ನೆಲ್ಲಿಹುದಿಕೇರಿ, ಜಿಸಿಸಿ ಅಧ್ಯಕ್ಷರಾದ ಅಝೀಝ್ ನೆಲ್ಲಿಹುದಿಕೇರಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್ ಝೋನ್, ಅಧ್ಯಕ್ಷ ನಝೀರ್ ಗುಂಡಿಕೆರೆ, ಕೆಸಿಎಫ್ ಝೋನಲ್ ನೇತಾರ ದಾವೂದ್ ಸಅದಿ, ಅನ್ವಾರುಲ್ ಹುದಾ ರಿಯಾದ್ ಸಮಿತಿಯ ಅಧ್ಯಕ್ಷ ರಫೀಕ್ ತಂಙಳ್ ಮಾಲ್ದಾರೆ, ಹಿರಿಯರಾದ ಹಮೀದ್ ಕೋಟಯಂ, ಕುಂಜಿಲ ಪೈನರಿ ಯುವಕರ ಸಂಘಟನೆಯಾದ ಕೆಎಸ್ಎ ಸಮಿತಿಯ ಅಧ್ಯಕ್ಷ ಕುಂಡಂಡ ಫೈಝಲ್ ಇದ್ದರು.

ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಂನಲ್ಲಿ ಈಚೆಗೆ ನಡೆದ ಮಿಲಾದ್ ಸಮಾವೇಶದಲ್ಲಿ ಪಾಲ್ಗೊಂಡ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.