ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ನಾಳಿಯಂಡ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 5:12 IST
Last Updated 2 ಏಪ್ರಿಲ್ 2024, 5:12 IST
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರ ಕಾಳಿಮಾಡ-ಮಾದೆಯಂಡ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಿದವು
ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರ ಕಾಳಿಮಾಡ-ಮಾದೆಯಂಡ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಿದವು   

ನಾಪೋಕ್ಲು (ಕೊಡಗು): ನಾಳಿಯಂಡ ತಂಡವು ಸೋಮವಾರ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಪೂಲಂಡ ವಿರುದ್ಧ 5–0ಯಿಂದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಬಾದುಮಂಡ ತಂಡವು 4–0 ಯಿಂದ ಚನ್ನಪಂಡ ತಂಡವನ್ನು ಮಣಿಸಿತು.

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 3ನೇ ದಿನದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ, ಕೋಣಿಯಂಡ, ಕೋಲು ಮಾದಂಡ ಐಚುಡ ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ದಿನದ ಫಲಿತಾಂಶ: ಕೋಣಿಯಂಡ ತಂಡವು ಮಂಡಿರ ತಂಡದ ವಿರುದ್ಧ 1-0 ಅಂತರದಿಂದ; ಕೋಲು ಮಾಡಂಡ ತಂಡವು ಅಕ್ಕಪಂಡ ತಂಡದ ವಿರುದ್ಧ 1-0 ಅಂತರದಿಂದ; ಐಚಂಡ ತಂಡ ಮುಕ್ಕಾಟಿರ (ಬೇತ್ರಿ) ತಂಡದ ವಿರುದ್ಧ 4-1 ಅಂತರದಿಂದ; ಪಾಲೇಕಡ ತಂಡ ಮೇದುರ ತಂಡದ ವಿರುದ್ಧ 1-0 ಅಂತರದಿಂದ; ಮೂಕಚಂಡ ತೆನ್ನಿರ ವಿರುದ್ಧ 3- 0 ಅಂತರದಿಂದ ಜಯ ಗಳಿಸಿದವು.

ADVERTISEMENT

ಗಂಡಂಗಡ ಮತ್ತು ಮಚ್ಚುರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಶೂಟ್ ಔಟ್‌ನಲ್ಲಿ ಮಚ್ಚುರ ತಂಡ 3 ಗೋಲು ಗಳಿಸಿದರೆ, ಗಂಡಂಗಡ ತಂಡ 4 ಗೋಲು ಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

ತಾಪಂಡ ಮತ್ತು ಚೋಕಿರ ತಂಡಗಳು ಸಹ ಸಮಬಲ ಸಾಧಿಸಿದವು. ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಚೋಕಿರ 3 ಗೋಲು ಗಳಿಸಿದರೆ ತಾಪಂಡ 2 ಗೋಲು ಗಳಿಸಿ, ಚೋಕಿರ ಮುಂದಿನ ಸುತ್ತು ಪ್ರವೇಶಿಸಿತು.

ಬೊಟ್ಟಂಗಡ ತಂಡವು 3- 0 ಅಂತರದಿಂದ ಅಣ್ಣೀರ ತಂಡವನ್ನು; ಮಾಣಿರ ತಂಡವು 1–0 ಅಂತರದಿಂದ ಕುಯಿಮಂಡ ತಂಡವನ್ನು; ಕಾಳಿಮಾಡ ತಂಡವು 2–0 ಅಂತರದಿಂದ ಮಾದೆಯಂಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿದವು.

ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರ ಕಾಳಿಮಾಡ-ಮಾದೆಯಂಡ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಿದವು
ಪಾಲೆಂಗಡ ಮತ್ತು ಮೇದುರ ತಂಡಗಳ ನಡುವಿನ ಪಂದ್ಯದಲ್ಲಿ ಪಾಲೆಂಗಡ ತಂಡದ ಆಟಗಾರರು ಗೋಲು ಹೊಡೆದು ಸಂಭ್ರಮಿಸಿದ ಕ್ಷಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.