ADVERTISEMENT

ನಕ್ಸಲ್ ನಾಯಕನ ಹತ್ಯೆ: ಕೊಡಗಿನ ಗಡಿಗಳಲ್ಲಿ ಹದ್ದಿನ ಕಣ್ಣು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 3:58 IST
Last Updated 21 ನವೆಂಬರ್ 2024, 3:58 IST
<div class="paragraphs"><p>ಉಪ್ಪಿನಂಗಡಿ ಸಮೀಪದ ಶಿಶಿಲ ಗ್ರಾಮದ ಹೊಳೆಗಂಡಿ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಮನೆ ಭೇಟಿ ಮಾಡಿದ ಬಳಿಕ ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೂಬಿಂಗ್ ನಡೆದಿತ್ತು.</p></div>

ಉಪ್ಪಿನಂಗಡಿ ಸಮೀಪದ ಶಿಶಿಲ ಗ್ರಾಮದ ಹೊಳೆಗಂಡಿ ಪ್ರದೇಶದಲ್ಲಿ 2012ರಲ್ಲಿ ನಕ್ಸಲರು ಮನೆ ಭೇಟಿ ಮಾಡಿದ ಬಳಿಕ ನಕ್ಸಲ್ ನಿಗ್ರಹ ಪಡೆಯ ಕಮಾಂಡೆಂಟ್ ಆಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೂಬಿಂಗ್ ನಡೆದಿತ್ತು.

   

(ಸಂಗ್ರಹ ಚಿತ್ರ)

ಮಡಿಕೇರಿ: ಪೊಲೀಸರ ಗುಂಡಿಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿಯಾದ ನಂತರ ಕೊಡಗಿನ ಗಡಿಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ADVERTISEMENT

ವಿಕ್ರಂಗೌಡ ಅವರ ಜೊತೆಯಲ್ಲಿದ್ದ ನಕ್ಸಲರು ಕಾಡಿನೊಳಗೆ ಪರಾರಿಯಾಗಿರುವುದರಿಂದ ಅವರು ಕಾಡಿನ ಹಾದಿಯ ಮೂಲಕ ಕೊಡಗಿನತ್ತ ಬರಬಹುದೇ ಎಂಬ ಶಂಕೆಯಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊಡಗಿನಲ್ಲಿ ನಕ್ಸಲರ ತಂಡದ ಸುಳಿವು ಸದ್ಯಕ್ಕೆ ಲಭ್ಯವಾಗಿಲ್ಲ. ಹಾಗಿದ್ದರೂ, ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.