ಮಡಿಕೇರಿ: ಇಲ್ಲಿನ ರಾಜರ ಗದ್ದುಗೆಯ ಆಸುಪಾಸಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‌ಸಿಸಿಯ ವಿದ್ಯಾರ್ಥಿ ಕೆಡೆಟ್‌ಗಳು ಭಾನುವಾರ ಸ್ವಚ್ಛಗೊಳಿಸಿದರು.
ಎನ್‌ಸಿಸಿ ದಿನಾಚರಣೆ ಪ್ರಯುಕ್ತ ನಡೆದ ಈ ಕಾರ್ಯದಲ್ಲಿ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿ ಕೆಡೆಟ್‌ಗಳು ಭಾಗಿಯಾದರು.
ಕೆಡೆಟ್‌ಗಳು ಗದ್ದುಗೆಯ ಆಸುಪಾಸಿನಲ್ಲಿದ್ದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸಂಗ್ರಹಿಸಿದರು. ಗದ್ದುಗೆಯ ಗೋಡೆಗಳನ್ನು ಸ್ವಚ್ಛಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್‌ಸಿಸಿ ಅಧಿಕಾರಿಗಳಾದ ಮೇಜರ್ ಪ್ರೊ ರಾಘವ ಬಿ ಮತ್ತು ಹವಾಲ್ದಾರ್ ಮೇಜರ್ ರಾಮ್ ಬಹದ್ದೂರ್ ಥಾಪಾ ಮತ್ತು ಉಪನ್ಯಾಸಕರಾದ ಪವನ್ ಕುಮಾರ್ ಮಾರ್ಗದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.