ADVERTISEMENT

ಕುಶಾಲನಗರ: ಶಿಥಿಲಾವಸ್ಥೆ ಕಟ್ಟಡ ತೆರವಿಗೆ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 4:37 IST
Last Updated 22 ಜೂನ್ 2024, 4:37 IST
ಕುಶಾಲನಗರ ಒಂದನೇ ಬ್ಲಾಕ್ ನಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ
ಕುಶಾಲನಗರ ಒಂದನೇ ಬ್ಲಾಕ್ ನಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ    

ಕುಶಾಲನಗರ: ಪಟ್ಟಣದ ಒಂದನೇ ಬ್ಲಾಕ್ ದಂಡಿನಪೇಟೆ ಬಡಾವಣೆಯ ಶಿಥಿಲಾವಸ್ಥೆಯ ಹಂಚಿನ ಕಟ್ಟಡದಲ್ಲಿ ವಾಸವಾಗಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ ಆ ಕಟ್ಟಡವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ನಾಲ್ವರು ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ಹಳೆಯ ಕಟ್ಟಡ ಧರೆಗೆ ಉರುಳಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಹಳೆಯ ಕಟ್ಟಡ ತೆರವಿಗೆ ಕ್ರಮ ಕೈಗೊಂಡಿದೆ.

ಪ್ರಸಕ್ತ ಮಳೆಗಾಲ ಆರಂಭವಾಗಿರುವುದರಿಂದ ಯಾವುದೇ ಸಮಯದಲ್ಲಿ ಬೀಳುವ ಹಂತದಲ್ಲಿದ್ದು, ಕೂಡಲೇ ಕಟ್ಟಡ ತೆರವುಗೊಳಿಸಬೇಕು ಎಂದು ಮಾಲೀಕರಾದ ವೆಳ್ಳಾಪುರ ಸಂಘದ ಅಧ್ಯಕ್ಷ ಎಂ.ಜಿ. ಮಹಮ್ಮದ್ ಖಾಸಿಂ, ಎಂ.ಜಿ. ಅಹ್ಮದ್ ಹುಸೇನ್, ಎಂ.ಜಿ. ಫಜಲುಲ್ ರೆಹಮಾನ್ ಅವರಿಗೆ ಪುರಸಭೆ ಮುಖ್ಯಾಧಿಕಾರಿಗಳು ನೋಟಿಸ್ ನೀಡಿದ್ದಾರೆ.

ADVERTISEMENT

ಈ ಕಟ್ಟಡದಲ್ಲಿ ಕೆಲವರು ವಾಸವಾಗಿದ್ದು, ಪ್ರಾಣ ಹಾನಿಯಾಗುವ ಸಂಭವವಿರುವುದರಿಂದ ಈ ನೋಟಿಸ್ ತಲುಪಿದ ತಕ್ಷಣ ಕಟ್ಟಡದಲ್ಲಿ ವಾಸವಾಗಿರುವ ಜನರನ್ನು ಖುಲ್ಲಾಪಡಿಸಿ ಕಟ್ಟಡವನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಮುಂದೆ ಸಂಭವಿಸುವ ಪ್ರಾಣಹಾನಿ ಹಾಗೂ ಕಷ್ಟ ನಷ್ಟಗಳಿಗೆ ನಿಮ್ಮನ್ನೇ ನೇರ ಹೊಣೆಯಾನ್ನಾಗಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.