ಕುಶಾಲನಗರ: ‘ಇಂದಿನ ಯುವಕರು ಗುರು ಹಿರಿಯರನ್ನು ಗೌರವಿಸುವ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ವಿದ್ಯಾವಂತರಾಗಿ ದೇಶಕ್ಕೆ ಗೌರವ ತರಬೇಕು’ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿನ ಕೇರಳ ಸಮಾಜದಿಂದ ಭಾನುವಾರ ಆಯೋಜಿಸಿದ್ದ ಓಣಂ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಓಣಂ ಆಚರಣೆ ಹಿಂದೂ ಸಂಸ್ಕೃತಿಯನ್ನು ಮೇಳೈಸುವ ಸುಂದರ ಆಚರಣೆ, ಕೇರಳಿಗರ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು’ ಎಂದು ಹೇಳಿದರು.
ಹಿಂದೂ ಮಲಯಾಳಿ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಕಳೆದು ಹೋಗುತ್ತಿರುವ ಹಿಂದೂ ಸಂಸ್ಕೃತಿ, ಸಂಪ್ರದಾಯವನ್ನು ಜೋಪಾನ ಮಾಡುವ ಹೊಣೆಗಾರಿಕೆ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿದರು.
ಕೇರಳ ಸಮಾಜದ ಅಧ್ಯಕ್ಷ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರಳಿ, ಮಡಿಕೇರಿ ಎಸ್ಎನ್‌ಡಿಪಿ ಅಧ್ಯಕ್ಷ ಹರೀಶ್ ಕುಮಾರ್, ವಾಸು, ಕೇರಳ ಸಮಾಜದ ಉಪಾಧ್ಯಕ್ಷ ಕೆ.ಬಾಬು, ಕಾರ್ಯದರ್ಶಿ ರಾಬಿನ್, ನಿರ್ದೇಶಕರಾದ ರಾಯ್,
ಎಂ.ಜೆ.ಪ್ರಕಾಶ್, ಸುಶೀಲಾ, ಎಂ.ಎಸ್. ಶಾಂತಿ, ಆನಂದ್, ರಂಜಿತ್ ಕುಮಾರ್, ಧನರಾಜ್, ಅಜಿತ ಧನರಾಜ್ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕೇರಳ ಸಮಾಜದ ಸ್ಥಾಪಕ ಅಧ್ಯಕ್ಷ ದಿವಂಗತ ಕೆ.ಶಿವಾನಂದನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಓಣಂ ಸದ್ಯಕ್ಕೆ ಧನಸಹಾಯ ಮಾಡಿದ ದಾನಿಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಜಾ ಪ್ರಾರ್ಥಿಸಿದರು.
ಕೆ.ವರದ ಸ್ವಾಗತಿಸಿದರು. ಶ್ರೀಷಾ ಪ್ರೀತಂ ನಿರೂಪಿಸಿದರು. ಮಾವೇಲಿ ವೇಷಧಾರಿಯಾಗಿ ಕಣ್ಣೂರಿನ ರಾರೀಶ್ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.