ADVERTISEMENT

ಓಣಂ: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 3:06 IST
Last Updated 16 ಸೆಪ್ಟೆಂಬರ್ 2024, 3:06 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯ ನಾರಾಯಣ, ಸುನಂದಾ ಹಾಗೂ ಮಕ್ಕಳು ರಂಗೋಲಿ ಹಾಕಿ ಓಣಂ ಆಚರಿಸಿದರು
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯ ನಾರಾಯಣ, ಸುನಂದಾ ಹಾಗೂ ಮಕ್ಕಳು ರಂಗೋಲಿ ಹಾಕಿ ಓಣಂ ಆಚರಿಸಿದರು   

ಗೋಣಿಕೊಪ್ಪಲು: ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಸಂಭ್ರಮಿಸುವ ಓಣಂ ಹಬ್ಬವನ್ನು ಪೊನ್ನಂಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ, ಹುದಿಕೇರಿ, ಪಾಲಿಬೆಟ್ಟ ಮೊದಲಾದ ಕಡೆ ಭಾನುವಾರ ಸಡಗರದಿಂದ ಆಚರಿಸಲಾಯಿತು.

ಮಲಯಾಳಿಗರು ತಮ್ಮ ಮನೆಯ ಮುಂದಿನ ಆವರಣದಲ್ಲಿ ಬಣ್ಣ ಬಣ್ಣದ ಸೇವಂತಿಗೆ ಮತ್ತು ಚೆಂಡು ಹೂವಿನ ಎಸಳುಗಳಲ್ಲಿ ಅಂದವಾದ ರಂಗೋಲಿ ಬಿಡಿಸಿದರು. ಜತೆಗೆ ತಾವು ಕೂಡ ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು.

ಹಬ್ಬದ ಊಟ ಸವಿದ ಬಳಿಕ ಪೊನ್ನಂಪೇಟೆಯಲ್ಲಿ ವಿವಿಧ ಬಗೆಯ ಕ್ರೀಡಾ ಚಟುವಟಿಕೆ ನಡೆಸಿ ಬಹುಮಾನ ನೀಡುವ ಮೂಲಕ ವಿಜೇತರನ್ನು ಅಭಿನಂದಿಸಿದರು. ದಕ್ಷಿಣ ಕೊಡಗಿನ ಊರುಗಳಲ್ಲಿ ಓಣಂ ಆಚರಣೆ ಕಂಡುಬಂತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.