ADVERTISEMENT

ಸುಂಟಿಕೊಪ್ಪ: ಕಾಡಾನೆ ಪ್ರತ್ಯಕ್ಷ, ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 6:24 IST
Last Updated 13 ಮಾರ್ಚ್ 2024, 6:24 IST
ಸುಂಟಿಕೊಪ್ಪ ಸಮೀಪದ ಮಂಜಿಕೆರೆ ಎಂಬಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿರುವುದು
ಸುಂಟಿಕೊಪ್ಪ ಸಮೀಪದ ಮಂಜಿಕೆರೆ ಎಂಬಲ್ಲಿ ಮಂಗಳವಾರ ಹಗಲು ಹೊತ್ತಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿರುವುದು   

ಸುಂಟಿಕೊಪ್ಪ: ಸಮೀಪದ‌ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಮಂಜಿಕೆರೆ ಗ್ರಾಮದಲ್ಲಿ ಮಂಗಳವಾರ ಹಗಲು ವೇಳೆಯಲ್ಲಿ ದಿಢೀರನೇ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಕಳೆದ ಹಲವು ತಿಂಗಳಿನಿಂದ‌ ಕಾಡಾನೆಗಳ ಹಾವಳಿಯಿಂದ ದೂರವಿದ್ದ ಜನತೆಗೆ ಮಂಗಳವಾರ ಗೋಚರಿಸಿದ ಕಾಡಾನೆಯಿಂದ ಕಾರ್ಮಿಕರು ಕೆಲಸ ಬಿಟ್ಟು ಮನೆ ಕಡೆ ಓಡಿ ಹೋಗಿದ್ದಾರೆ.

ಮಂಜಿಕೆರೆಯ ಗಂಗಾಧರ್ ಅವರ ತೋಟದ ಕೆರೆ ಕಡೆಯಿಂದ ಬಂದ ಈ ಕಾಡಾನೆ ಅಕ್ಕಪಕ್ಕದ ಮನೆಯ ಮುಂಭಾಗದಲ್ಲಿ ನಿಂತು ಕೆಲಕಾಲ ಭಯ ಉಂಟು ಮಾಡಿದೆ.

ADVERTISEMENT

ನಂತರ ಅಲ್ಲಿಂದ ಅನತಿ‌ ದೂರದಲ್ಲಿರುವ ಪುಟ್ಟಣ್ಣ ಎಂಬುವವರ ಮನೆ ಕಡೆ ಧಾವಿಸಿದೆ. ಜನರನ್ನು ಕಂಡು ಕಾಡಾನೆ ಭಯಗೊಂಡು ರಸ್ತೆ ಮಾರ್ಗವಾಗಿ ತೆರಳಿ ಅಲ್ಲಿಂದ ಕಾಡಿನೊಳಗೆ ನುಗ್ಗಿದೆ.

ಕಾಡಾನೆಯಿಂದ ಹೆದರಿದ ಪೋಷಕರು ತಮ್ಮ ಮಕ್ಕಳನ್ನು ತಾವೇ ಶಾಲೆಯಿಂದ ಕರೆ ತರಲು ತೆರಳಿದ ದೃಶ್ಯ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.