ADVERTISEMENT

ಕೊಡಗಿನಲ್ಲಿ ನಿಲ್ಲದ ಮಳೆ: ರಸ್ತೆಗೆ ಜಾರುತ್ತಲೇ ಇದೆ ಮಣ್ಣು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 7:12 IST
Last Updated 26 ಜುಲೈ 2024, 7:12 IST
<div class="paragraphs"><p>ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪದ ಜೇಡಿಗುಂಡಿ ಬಳಿ ನಿರಂತರವಾಗಿ ರಸ್ತೆಗೆ ಕುಸಿಯುತ್ತಿರುವ‌ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ</p><p></p></div>

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪದ ಜೇಡಿಗುಂಡಿ ಬಳಿ ನಿರಂತರವಾಗಿ ರಸ್ತೆಗೆ ಕುಸಿಯುತ್ತಿರುವ‌ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ

   

– ಪ್ರಜಾವಾಣಿ ಚಿತ್ರ

ADVERTISEMENT

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜೋರು ಗಾಳಿಯು ಶುಕ್ರವಾರ ಬಿರುಗಾಳಿಯ ಸ್ವರೂಪ ಪಡೆದುಕೊಂಡಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಅನೇಕ ಕಡೆ ಮರಗಳು ಬುಡಮೇಲಾಗುತ್ತಿವೆ.

ಗುರುವಾರವಷ್ಟೇ ಸೋಮವಾರಪೇಟೆ ತಾಲ್ಲೂಕಿನ ಜೇಡಿಗುಂಡಿ ಬಳಿ ರಸ್ತೆಗೆ ಕುಸಿದಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಮಣ್ಣು ಕುಸಿಯುತ್ತಿದೆ‌. ಜೆಸಿಬಿ ಮೂಲಕ ಎಷ್ಟೇ ಮಣ್ಣು ತೆಗೆದರೂ ಕೆಸರು ಮಿಶ್ರಿತ ಮಣ್ಣು ರಸ್ತೆಗೆ ಜಾರುತ್ತಲೇ ಇದ್ದು ಆತಂಕ ಮೂಡಿಸಿದೆ.

ಮತ್ತೊಂದೆಡೆ ಶಾಂತಳ್ಳಿ- ಸುಬ್ರಹ್ಮಣ್ಯ ರಸ್ತೆಯಲ್ಲಿ ಮರ ಬಿದ್ದು ಹಾಗೂ ಮಣ್ಣು ಜಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ‌.

ಶನಿವಾರಸಂತೆ ಹೋಬಳಿ ಹಾರೆ ಹೊಸೂರು ಗ್ರಾಮದ ಗಂಗಾಧರ ಅವರ ಮನೆಯ ಪಕ್ಕದಲ್ಲಿ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸುವ ಕಾರ್ಯ ನಡೆಯಿತು

ಕರ್ನಾಟಕ, ಕೇರಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಶ್ರೀಮಂಗಲದಿಂದ ಕುಟ್ಟ ಕಡೆ ಹೋಗುವ ರಸ್ತೆಯಲ್ಲಿ ಬಸ್ಸೊಂದು ಸಿಲುಕಿದ್ದು ಸಂಚಾರ ಸ್ಥಗಿತಗೊಂಡಿದೆ. ಇಲ್ಲಿ ಒಂದು ಬದಿ ರಸ್ತೆ ಕುಸಿದಿದ್ದು, ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಮತ್ತೊಂದು ಬದಿಯಲ್ಲೇ ಬಸ್ ಸಿಲುಕಿದೆ.

ಶನಿವಾರಸಂತೆ ಹೋಬಳಿ ಹಾರೆ ಹೊಸೂರು ಗ್ರಾಮದ ಗಂಗಾಧರ ಅವರ ಮನೆಯ ಪಕ್ಕದಲ್ಲಿ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸುವ ಕಾರ್ಯ ನಡೆದಿದೆ.

ಜಿಲ್ಲೆಯಾದ್ಯಂತ ಜೋರು ಗಾಳಿಯೊಂದಿಗೆ ಭಾರಿ ಮಳೆ ಒಂದೇ ಸಮನೆ ಸುರಿಯುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.