ADVERTISEMENT

ಕೊಡಗಿನಲ್ಲಿ ಮಳೆ ಚುರುಕು

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 11:09 IST
Last Updated 10 ಜುಲೈ 2019, 11:09 IST
ಮಂಜಿನ ಸೊಬಗು... ಮಡಿಕೇರಿಯ ರಾಜಾಸೀಟ್‌ನಲ್ಲಿ ಬುಧವಾರ ಮಳೆಯ ನಡುವೆ ಮಂಜಿನ ಸೊಬಗು ಕಂಡಿದ್ದು ಹೀಗೆ 
ಮಂಜಿನ ಸೊಬಗು... ಮಡಿಕೇರಿಯ ರಾಜಾಸೀಟ್‌ನಲ್ಲಿ ಬುಧವಾರ ಮಳೆಯ ನಡುವೆ ಮಂಜಿನ ಸೊಬಗು ಕಂಡಿದ್ದು ಹೀಗೆ    

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಬುಧವಾರ ಮಧ್ಯಾಹ್ನದ ನಂತರ ನಾಪೋಕ್ಲು, ಮಡಿಕೇರಿ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆ ಚುರುಕಾಗಿದೆ.

ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಕಾವೇರಿ ನದಿಯು ಮತ್ತಷ್ಟು ಮೈದುಂಬಿಕೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಹಾರಂಗಿ ಒಳಹರಿವು 1,274 ಕ್ಯುಸೆಕ್‌ಗೆ ಏರಿಕೆ ಕಂಡಿದೆ.

ನಾಪೋಕ್ಲು 50 ಮಿ.ಮೀ., ಭಾಗಮಂಡಲದಲ್ಲಿ 63, ಸಂಪಾಜೆ 46, ಶ್ರೀಮಂಗಲ 54, ಶಾಂತಳ್ಳಿ 58 ಮಿ.ಮೀ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.