ADVERTISEMENT

ಗೋಣಿಕೊಪ್ಪಲಿನಲ್ಲಿ ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:52 IST
Last Updated 17 ಅಕ್ಟೋಬರ್ 2024, 15:52 IST
ಗೋಣಿಕೊಪ್ಪಲಿನಲ್ಲಿ ಗುರುವಾರ ಆಗಾಗ್ಗೆ ಬಿದ್ದ ಮಳೆಗೆ ಜನರು ಛತ್ರಿಯ ಮೊರೆ ಹೋದರು
ಗೋಣಿಕೊಪ್ಪಲಿನಲ್ಲಿ ಗುರುವಾರ ಆಗಾಗ್ಗೆ ಬಿದ್ದ ಮಳೆಗೆ ಜನರು ಛತ್ರಿಯ ಮೊರೆ ಹೋದರು   

ಗೋಣಿಕೊಪ್ಪಲು: ಪಟ್ಟಣದಲ್ಲಿ ಬೆಳಗಿನಿಂದಲೂ ಮೋಡ ಕವಿದ ವಾತಾವರಣ ಇದ್ದು ಸುತ್ತಮುತ್ತ ದಿನವಿಡೀ ಸಾಧಾರಣವಾಗಿ ಮಳೆ ಬಿದ್ದಿತು.

ಆಗಾಗ್ಗೆ ಬಿಸಿಲು ಬಂದು ಮಾಯ ಮಾಯವಾಗಿ ಮತ್ತೆ ಮಳೆ ಬಿದ್ದಿತು. ಪೊನ್ನಂಪೇಟೆ ಪಟ್ಟಣದಲ್ಲಿ ಬೆಳಿಗ್ಗೆ ಮಳೆ ಆರಂಭಗೊಂಡದ್ದರಿಂದ 10 ಗಂಟೆ ವೇಳೆಗೆ ಶುರುವಾಗಬೇಕಿದ್ದ ವಾಲ್ಮೀಕಿ ಜಯಂತಿ ಮೆರವಣಿಗೆ 11 ಗಂಟೆ ಆರಂಭಗೊಂಡಿತು.

ಬಿ.ಶೆಟ್ಟಿಗೇರಿ, ಕುಂದ, ಹುದಿಕೇರಿ, ಶ್ರೀಮಂಗಲ, ಬಾಳೆಲೆ, ತಿತಿಮತಿ ಭಾಗಕ್ಕೂ ಇಡೀ ದಿನ ಮಳೆ ಬಿದ್ದಿತು. ಇದರ ನಡುವೆ ಭಕ್ತರು ಕಾವೇರಿ ತೀರ್ಥವನ್ನು ಜನತೆಗೆ ಹಂಚಿದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.