ADVERTISEMENT

ಕಣಿವೆ: ಕಾವೇರಿ ನದಿಗೆ ಮೀನು ಮರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:24 IST
Last Updated 2 ಜುಲೈ 2024, 14:24 IST
ಕುಶಾಲನಗರ ಸಮೀಪದ ಕಣಿವೆ ಬಳಿಯ ಕಾವೇರಿ ನದಿಗೆ‌ ಹಾರಂಗಿ ಮೀನುಗಾರಿಕೆ ಇಲಾಖೆ ವತಿಯಿಂದ ಒಂದು ಲಕ್ಷಕ್ಕೂ ಅಧಿಕ ಮೀನುಮರಿಗಳನ್ನಯ ಬಿಡಲಾಯಿತು.
ಕುಶಾಲನಗರ ಸಮೀಪದ ಕಣಿವೆ ಬಳಿಯ ಕಾವೇರಿ ನದಿಗೆ‌ ಹಾರಂಗಿ ಮೀನುಗಾರಿಕೆ ಇಲಾಖೆ ವತಿಯಿಂದ ಒಂದು ಲಕ್ಷಕ್ಕೂ ಅಧಿಕ ಮೀನುಮರಿಗಳನ್ನಯ ಬಿಡಲಾಯಿತು.   

ಕುಶಾಲನಗರ: ಸಮೀಪದ ಕಣಿವೆ ಬಳಿಯ ಕಾವೇರಿ ನದಿಗೆ ಹಾರಂಗಿ ಮೀನುಗಾರಿಕೆ ಇಲಾಖೆಯಿಂದ ಮಂಗಳವಾರ ಒಂದು ಲಕ್ಕಕ್ಕೂ ಅಧಿಕ ಮೀನು ಮರಿಗಳನ್ನು ಬಿಡಲಾಯಿತು.

‘ನದಿಯಲ್ಲಿ ಮೀನಿನ ಸಂತತಿ ವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಮತ್ತು ಕಾವೇರಿ ನದಿ ಸಿಹಿ ನೀರಿನಲ್ಲಿ ಮೀನಿನ ಬೆಳವಣಿಗೆಗೆ ಅನುಕೂಲಕಾರವಾಗುವ ದೃಷ್ಟಿಯಿಂದ ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಮೀನಿನ ಮರಿಗಳನ್ನು ನದಿಗೆ ಬಿಡಲಾಗುತ್ತಿದೆ’ ಎಂದು ಸಹಾಯಕ ನಿರ್ದೇಶಕ ಸಚಿನ್ ತಿಳಿಸಿದರು.

ಈ ಸಂದರ್ಭ ಮೀನುಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಿ.ತಿಪ್ಪೇಸ್ವಾಮಿ, ಮೈಸೂರು ವಲಯ ಜಂಟಿ ನಿರ್ದೇಶಕ ಗಣೇಶ್, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ಮಾಧುಸ್ವಾಮಿ, ಮಡಿಕೇರಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಿ.ಎಸ್. ಸಚಿನ್‌ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.