ADVERTISEMENT

ಕೊಡಗು: ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿದ ಕಾಡಾನೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:36 IST
Last Updated 24 ನವೆಂಬರ್ 2024, 14:36 IST
   

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ವಾಲ್ನೂರಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಹೊರಬರಲಾರದೇ ಪರದಾಡುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

‘ಹೆಣ್ಣಾನೆಯೊಂದು ತೋಟದಿಂದ ಕಾಡಿನತ್ತ ಹೊರಡಲು ರೈಲ್ವೆ ಬ್ಯಾರಿಕೇಡ್‌ ಒಳಗೆ ನುಸುಳಲು ಯತ್ನಿಸಿ ಸಿಲುಕಿಕೊಂಡಿತ್ತು. ಆಗ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ರೈಲ್ವೆ ಬ್ಯಾರಿಕೇಡ್‌ನ ಬೋಲ್ಟ್‌ಗಳನ್ನು ಬಿಚ್ಚುತ್ತಿದ್ದಂತೆ ಆನೆ ಕಾಡಿನೊಳಗೆ ಹೊರಟಿತು’ ಎಂದು ವಲಯ ಅರಣ್ಯಾಧಿಕಾರಿ ರತನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾರಿಕೇಡ್‌ನ ಬೋಲ್ಟ್‌ಗಳನ್ನು ಬಿಚ್ಚುತ್ತಿದ್ದಂತೆ ಆನೆ ಕಾವೇರಿ ಹೊಳೆ ದಾಟಿ ಕಾಡಿನೊಳಗೆ ಹೊರಟಿತು.

ADVERTISEMENT

ಸ್ಥಳಕ್ಕೆ ರತನ್ ಸೇರಿದಂತೆ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿ ತೆರಳಿ ಕಾರ್ಯಾಚರಣೆಯಲ್ಲಿ ಭಾಗಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.